ಪೊಲೀಸರ ಕೋಮು ತಾರತಮ್ಯವೇ ಜೈಲುಗಳಲ್ಲಿ ಹೆಚ್ಚು ಮುಸ್ಲಿಮರು ಇರಲು ಕಾರಣ

Prasthutha|

ನವದೆಹಲಿ: ಎನ್ ಸಿ ಆರ್ ಬಿ- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯಂತೆ ಆಳುವ ಪಕ್ಷಗಳು ಯಾವುದೇ ಆಗಿದ್ದರೂ ದೇಶದ ಎಲ್ಲ ರಾಜ್ಯಗಳ ಜೈಲುಗಳಲ್ಲಿ ಮುಸ್ಲಿಮರ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ.

- Advertisement -


ಇಲ್ಲಿ ಮುಸ್ಲಿಮರ ವಿಷಯ ಗಮನಿಸಲೇ ಬೇಕು. ಎರಡನೆಯ ಅವಧಿಯ ಯುಪಿಎ ಆಡಳಿತದಲ್ಲಿ ವಿಚಾರಣಾಧೀನ ಶೇಕಡಾ 22.5 ಶೇಕಡಾದಲ್ಲಿ 21 ಶೇಕಡಾ ಮುಸ್ಲಿಮರಾಗಿದ್ದರು. 2014- 19ರ ಅವಧಿಯ ಎನ್ ಡಿ ಎ ಎರಡನೆಯ ಅವಧಿಯಲ್ಲಿ 21 ಶೇಕಡಾ ವಿಚಾರಣಾಧೀನ ಕೈದಿಗಳಲ್ಲಿ 19 ಶೇಕಡಾ ಮುಸ್ಲಿಮರಾಗಿದ್ದರು. ಕಾನೂನು ಸುವ್ಯವಸ್ಥೆಯು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾದುದರಿಂದ ಇದನ್ನು ಆ ಮಟ್ಟದಲ್ಲೇ ಕೂಲಂಕಷವಾಗಿ ಪರಿಶೀಲಿಸಬೇಕು.


ಹಿಂದೂಗಳೇ ಬಹು ಸಂಖ್ಯೆಯಲ್ಲಿರುವ ಎಲ್ಲ ರಾಜ್ಯಗಳ ಜೈಲುಗಳಲ್ಲೂ ತುಂಬಿರುವವರಲ್ಲಿ ಮುಸ್ಲಿಮರ ಸಂಖ್ಯೆಯೇ ಹೆಚ್ಚು. 2011ರ ಜನಗಣತಿಯಂತೆ ಅಸ್ಸಾಂನಲ್ಲಿ ಮುಸ್ಲಿಮರ ಪ್ರಮಾಣವು ಶೇ.34, ವಿಚಾರಣಾಧೀನ 47.5% ಕೈದಿಗಳಲ್ಲಿ ಮುಸ್ಲಿಮರು ಶೇ.43ರಷ್ಟಿದ್ದಾರೆ.

- Advertisement -


ಗುಜರಾತಿನಲ್ಲಿ ಮುಸ್ಲಿಮರ ಜನಸಂಖ್ಯೆ 10 ಶೇಕಡಾ. 2017ರಿಂದ ವಿಚಾರಣಾಧೀನರಲ್ಲಿ ಅವರ ಪ್ರಮಾಣವು 27ಕ್ಕೆ ಶೇ.25ರಷ್ಟು ಇದೆ. 2013ರಲ್ಲಿ ಶೇ.24ರಷ್ಟು ಇದ್ದರು.
ಕರ್ನಾಟಕದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣವು 13 ಶೇಕಡಾ. 2018ರಿಂದ ವಿಚಾರಣಾಧೀನ 22%ದಲ್ಲಿ ಮುಸ್ಲಿಮರು 19% ಇದ್ದಾರೆ. 2013- 17ರ ಅವಧಿಯಲ್ಲಿ 14ರಲ್ಲಿ 13 ಶೇಕಡಾ ಇದ್ದರು.
ಕೇರಳದಲ್ಲಿ ಮುಸ್ಲಿಮರ ಜನಸಂಖ್ಯೆಯು 26.5 ಶೇಕಡಾ ಇದೆ. ಇಲ್ಲಿನ 30% ವಿಚಾರಣಾಧೀನರಲ್ಲಿ 28% ಮುಸ್ಲಿಮರಾಗಿದ್ದಾರೆ. ಮಧ್ಯ ಪ್ರದೇಶದಲ್ಲಿ ಮುಸ್ಲಿಮರು ಜನಸಂಖ್ಯೆಯ 6.5% ಇದ್ದಾರೆ. 2017ರಿಂದ ವಿಚಾರಣಾಧೀನರ 15%ದಲ್ಲಿ 12% ಮುಸ್ಲಿಮರಿರುವರು. 2013ರಲ್ಲಿ 13% ಇದ್ದರು.


ಮಹಾರಾಷ್ಟ್ರದಲ್ಲಿ ಮುಸ್ಲಿಂ ಜನಸಂಖ್ಯೆಯು 11.5 ಶೇಕಡಾ ಇದೆ. 2012ರಲ್ಲಿ ಅತಿ ಹೆಚ್ಚು 36.5% ವಿಚಾರಣಾಧೀನ ಮುಸ್ಲಿಮರಿದ್ದರು. 2009ರಲ್ಲಿ ಮತ್ತು 2015ರಲ್ಲಿ 30 ಶೇಕಡಾ ಮಟ್ಟದಲ್ಲಿ ಇದೆ. ರಾಜಸ್ತಾನದಲ್ಲಿ ಮುಸ್ಲಿಂ ಜನಬಾಹುಳ್ಯವು 9 ಶೇಕಡಾ. ಅಲ್ಲಿನ 23% ವಿಚಾರಣಾಧೀನರಲ್ಲಿ 18% ಮುಸ್ಲಿಮರು. 2013ರಲ್ಲಿ 18% ಇತ್ತು. ತಮಿಳುನಾಡಿನಲ್ಲಿರುವ ಮುಸ್ಲಿಮರು 6 ಶೇಕಡಾ. 2017ರಿಂದ 11% ವಿಚಾರಣಾಧೀನರು ಮುಸ್ಲಿಮರಿದ್ದಾರೆ. ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣವು 19 ಶೇಕಡಾ. 2012ರಿಂದ ವಿಚಾರಣಾಧೀನ 29%ದಲ್ಲಿ ಮುಸ್ಲಿಮರು 26% ಇದ್ದಾರೆ.


ಪಶ್ಚಿಮ ಬಂಗಾಳದಲ್ಲಿ 27 ಶೇಕಡಾ ಮುಸ್ಲಿಂ ಜನ ಪಾಲು ಇದೆ. 2017ರಿಂದ ವಿಚಾರಣಾಧೀನ ಮುಸ್ಲಿಮರ ಪ್ರಮಾಣವು 36% ಇದೆ. ಒಂದೇ ಒಂದು ರಾಜ್ಯದಲ್ಲಿ ಮಾತ್ರ ವಿಚಾರಣಾಧೀನ ಕೈದಿಗಳಲ್ಲಿ ಮುಸ್ಲಿಮರ ಪ್ರಮಾಣವು ಕಡಿಮೆ ಇದೆ; ಅದು ಬಿಹಾರ. ಬಿಹಾರ ರಾಜ್ಯದಲ್ಲಿ ಮುಸ್ಲಿಂ ಜನ ಪ್ರಮಾಣವು 17 ಶೇಕಡಾ ಇದೆ. ಇಲ್ಲಿ ವಿಚಾರಣಾಧೀನ ಮುಸ್ಲಿಮರು 15%ರಷ್ಟಿದ್ದಾರೆ.


ಜೈಲುಗಳಲ್ಲಿ ಮುಸ್ಲಿಂ ಬಂಧಿಗಳು, ಅದರಲ್ಲೂ ವಿಚಾರಣಾಧೀನರು ಅಧಿಕ ಪ್ರಮಾಣದಲ್ಲಿ ಇರಲು ಪೊಲೀಸರ ಪಕ್ಷಪಾತ ಧೋರಣೆಯೇ ಕಾರಣ. ಹಲವಾರು ರಾಜ್ಯಗಳಲ್ಲಿ ಶಿಕ್ಷೆಗೊಳಗಾದ ಮುಸ್ಲಿಮರ ಪ್ರಮಾಣವು ವಿಚಾರಣಾಧೀನಕ್ಕೆ ಹೋಲಿಸಿದರೆ ತುಂಬ ಕಡಿಮೆ ಇದೆ. 2019ರಲ್ಲಿ ವಿಚಾರಣಾಧೀನರ ಪ್ರಮಾಣವು ಅಸ್ಸಾಂನಲ್ಲಿ 47.5%ದಿಂದ 39.6%ಕ್ಕೆ ಕುಸಿಯಿತು; ಶಿಕ್ಷಿತರ ಸಂಖ್ಯೆಯು ತಗ್ಗಿತು.
ಕರ್ನಾಟಕದಲ್ಲಿ 19.5%ದಿಂದ 14%ಕ್ಕೆ, ಕೇರಳದಲ್ಲಿ 12ರಿಂದ 10%ಕ್ಕೆ, ಮಧ್ಯ ಪ್ರದೇಶದಲ್ಲಿ 31%ದಿಂದ 27%ಕ್ಕೆ ತಗ್ಗಿತು. ಮಹಾರಾಷ್ಟ್ರದಲ್ಲಿ 30ರಿಂದ 20%ಕ್ಕೆ, ರಾಜಸ್ತಾನದಲ್ಲಿ 185ದಿಂದ 17%ಕ್ಕೆ, ಉತ್ತರ ಪ್ರದೇಶದಲ್ಲಿ 29%ದಿಂದ 22%ಕ್ಕೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ನ್ಯಾಯಾಲಯದಲ್ಲಿ ನಿಲ್ಲುವಷ್ಟು ಸಾಕ್ಷ್ಯಾಧಾರಗಳು ಮುಸ್ಲಿಂ ವಿಚಾರಣಾಧೀರರ ಬಗ್ಗೆ ಇರುವುದಿಲ್ಲ. ನ್ಯಾಯಾಧೀಶರು ಬಿಡುಗಡೆ ಮಾಡುತ್ತಾರೆ ಇಲ್ಲವೇ ಮೊಕದ್ದಮೆ ವಜಾ ಮಾಡುತ್ತಾರೆ. ಆದರೆ ಅಷ್ಟರೊಳಗೆ ವಿಚಾರಣಾಧೀನರು ಹೆಚ್ಚಿನ ಮೊಕದ್ದಮೆಗಳಲ್ಲಿ ದೀರ್ಘ ಕಾಲ ಜೈಲಿನಲ್ಲಿ ಕಳೆದಿರುತ್ತಾರೆ.


ಹಲವು ರಾಜ್ಯಗಳಲ್ಲಿ, ಕರ್ನಾಟಕ, ಕೇರಳ, ಅಷ್ಟೇ ಏಕೆ ಉತ್ತರ ಪ್ರದೇಶದಲ್ಲೂ ಸಹ ಶಿಕ್ಷಿತ ಮುಸ್ಲಿಮರ ಪ್ರಮಾಣವು ಅವರ ಜನಸಂಖ್ಯಾ ಪ್ರಮಾಣಕ್ಕಿಂತ ಕಡಿಮೆಯೇ ಇದೆ. ಆದರೆ ವಿಚಾರಣಾಧೀನ ಹೆಸರಿನಲ್ಲಿ ಮುಸ್ಲಿಮರನ್ನು ಸೆರೆಮನೆಯಲ್ಲಿ ಕೊಳೆಸಲು ಪೊಲೀಸರು ಸದಾ ಕಾರಣವಿಲ್ಲದೆಯೇ ಮುಂದಿರುತ್ತಾರೆ ಎಂಬುದು ಇದರಿಂದ ಸ್ಪಷ್ಟವಿದೆ. ಒಟ್ಟಾರೆ 2011ರ ಜನಗಣತಿಯಂತೆ ದೇಶದ ಮುಸ್ಲಿಮರ ಜನಸಂಖ್ಯೆ 14.2%ಕ್ಕಿಂತ ಶಿಕ್ಷಿತರ ಸಂಖ್ಯೆಯು 2.5%ದಷ್ಟು ಮಾತ್ರ ಹೆಚ್ಚು ಶಿಕ್ಷೆಗೊಳಗಾದವರಾಗಿದ್ದಾರೆ.


ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಪೊಲೀಸರು ಮತ್ತು ನ್ಯಾಯಾಂಗ ಒಂದೇ ಪುಟ ನೋಟದಲ್ಲಿ ಇವೆ. ವಿಚಾರಣಾಧೀನ ಮತ್ತು ಶಿಕ್ಷಿತ ಮುಸ್ಲಿಮರ ಪ್ರಮಾಣ ಒಂದೇ ಆಗಿರುವುದು ತಮಿಳುನಾಡಿನಲ್ಲಿ ಮಾತ್ರ. ಅದು 11 ಶೇಕಡಾ. ಮೂರು ರಾಜ್ಯಗಳಲ್ಲಿ ಶಿಕ್ಷಿತರ ಸಂಖ್ಯೆಯು ವಿಚಾರಣಾಧೀನರ ಮೀರಿ ಇದೆ. ಗುಜರಾತ್ 25%ಕ್ಕೆ ಎದುರಾಗಿ 31%, ಪಶ್ಚಿಮ ಬಂಗಾಳ 38%ಕ್ಕೆ ಎದುರಾಗಿ 37%, ಬಿಹಾರ 18%ಕ್ಕೆ ಎದುರಾಗಿ 15%ರಷ್ಟಿದೆ. ಎಲ್ಲ ರಾಜ್ಯಗಳ ಜೈಲುಗಳಲ್ಲಿ ಶಿಕ್ಷಿತರಿಗಿಂತ ವಿಚಾರಣಾಧೀನ ಮುಸ್ಲಿಂ ಸೆರೆಯಾಳುಗಳ ಸಂಖ್ಯೆ ಅಧಿಕವಾಗಿದ್ದರೆ ಜಮ್ಮು ಮತ್ತು ಕಾಶ್ಮೀರ ಇದಕ್ಕೆ ಸ್ವಲ್ಪ ವ್ಯತ್ಯಾಸವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಜನಸಂಖ್ಯೆಯು 28.5% ಇದೆ. ಇಲ್ಲಿನ 2014- 2019ರ ನಡುವೆ ವಿಚಾರಣಾಧೀನರಲ್ಲಿ 39.5%ದಲ್ಲಿ 34% ಹಿಂದೂಗಳಿದ್ದಾರೆ. ಶಿಕ್ಷಿತರ ಪ್ರಮಾಣವು ಸಹ ಮುಸ್ಲಿಮರಿಗಿಂತ ಹೆಚ್ಚು 42.6%ಕ್ಕೆ 50.5% ಇದೆ. ಜಮ್ಮು ಕಾಶ್ಮೀರದ ಮುಸ್ಲಿಂ ಜನಸಂಖ್ಯೆಯು 68.3%ವಾಗಿದೆ.
ವಿಚಾರಣಾಧೀನ ಮತ್ತು ಶಿಕ್ಷಿತ ಪ್ರಮಾಣದಲ್ಲಿಯೂ ಹಿಂದೂ ಮುಸ್ಲಿಮರ ಪ್ರಮಾಣವು 60.5% ಮತ್ತು 56% ಅದೇ ಶಿಕ್ಷಿತರಲ್ಲಿ 53 ಮತ್ತು 43 ಶೇಕಡಾದ ನಡುವೆ ಇದೆ. ಮುಸ್ಲಿಮರು ಜನಸಂಖ್ಯೆಗಿಂತ 2% ಮತ್ತು 4.5% ಅಧಿಕವೆನಿಸುತ್ತದೆ.


ಈ ಎಲ್ಲ ಅಂಕಿ ಸಂಖ್ಯೆಗಳನ್ನು ವಿಶ್ಲೇಷಿಸಿದಾಗ ಕಾಡುವ ಅಂಶವೆಂದರೆ ಎಲ್ಲ ರಾಜ್ಯಗಳಲ್ಲಿಯೂ ಅಲ್ಪಸಂಖ್ಯಾತರು ಜೈಲುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಅದರಲ್ಲೂ ವಿಚಾರಣಾಧೀನರಾಗಿ ಇದ್ದಾರೆ. ಇದರಲ್ಲಿ ಆಳುವವರ ಪಾತ್ರಕ್ಕಿಂತಲೂ ಪೊಲೀಸರ ಕೋಮು ಮನೋಭಾವವೇ ಎದ್ದು ಕಾಣುತ್ತದೆ. ಅಲ್ಪಸಂಖ್ಯಾತರ ಪೊಲೀಸ್ ನೇಮಕಾತಿಯನ್ನು ಹೆಚ್ಚಿಸುವುದು, ಮತ್ತು ಅಲ್ಪಸಂಖ್ಯಾತರಿಗೆ ಹೆಚ್ಚು ಬಡ್ತಿ ನೀಡುವ ಮೂಲಕ ಇದನ್ನು ಒಂದು ಮಟ್ಟಿಗೆ ಸರಿ ಮಾಡಬಹುದು ಎನಿಸುತ್ತದೆ.
ನಿಜ, ಜಮ್ಮು ಕಾಶ್ಮೀರದ ಹೊರತಾಗಿ ಬೇರೆಲ್ಲ ರಾಜ್ಯಗಳಲ್ಲಿ ಮುಸ್ಲಿಂ ಐಪಿಎಸ್ ಅಧಿಕಾರಿಗಳ ಸಂಖ್ಯೆಯು ತೀರಾ ಕಡಿಮೆ ಇದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp