ನವದೆಹಲಿ: ಆಭರಣ ತಯಾರಿಕೆ ಮತ್ತು ರಫ್ತು ಸಮೂಹವೊಂದರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 500 ಕೋಟಿ ರೂ. ಕಪ್ಪು ಹಣ ಪತ್ತೆಯಾಗಿದೆ.
ದಾಳಿ ವೇಳೆ 4 ಕೋಟಿ ರೂ. ನಗದು ಹಾಗೂ 9 ಕೋಟಿ ರೂ. ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅನೇಕ ದಾಖಲೆ ಪತ್ರಗಳು ದೊರೆತಿವೆ. ಕಂಪನಿಯವರು 72 ಕೋಟಿ ರೂ.ನಷ್ಟು ಹಣಕ್ಕೆ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನದ ಜೈಪುರ ಮೂಲದ ಕಂಪೆನಿ ಇದಾಗಿದ್ದು, ಆಫ್ರಿಕನ್ ದೇಶದಿಂದ ಕಚ್ಚಾ ರೂಪದ ಅಮೂಲ್ಯ ಆಭರಣ ಹರಳುಗಳನ್ನು ತಂದು ಜೈಪುರದಲ್ಲಿ ಸಂಸ್ಕರಣೆ ಮಾಡುತ್ತಿತ್ತು. ಅದರಿಂದ ಬಂದ ಆದಾಯವನ್ನು ಬಚ್ಚಿಡುತ್ತಿತ್ತು ಎಂಬುದಾಗಿ ವರದಿಯಾಗಿದೆ.