ಯಾವ ಸರ್ಕಾರದ ಅವಧಿಯಲ್ಲಿ ಗುಜರಾತ್ ಗಲಭೆ ನಡೆಯಿತು? CBSE ಪರೀಕ್ಷೆಯಲ್ಲಿ ಹೀಗೊಂದು ಪ್ರಶ್ನೆ!

Prasthutha|

ಹೊಸದಿಲ್ಲಿ: ಪರೀಕ್ಷೆಯಲ್ಲಿ ಗುಜರಾತ್ ಗಲಭೆ ಕುರಿತ ಪ್ರಶ್ನೆಗಳನ್ನು ಸೇರಿಸುವ ಮೂಲಕ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ವಿವಾದಕ್ಕೆ ಸಿಲುಕಿದೆ.

- Advertisement -

ಹನ್ನೆರಡನೇ ತರಗತಿಯ ಸಮಾಜಶಾಸ್ತ್ರ ಪರೀಕ್ಷೆಯಲ್ಲಿ ಗುಜರಾತ್ ಗಲಭೆ ಕುರಿತ ಪ್ರಶ್ನೆಯನ್ನು ಸೇರಿಸಲಾಗಿತ್ತು.
2002 ರಲ್ಲಿ ಗುಜರಾತ್‌ ನಲ್ಲಿ ಮುಸ್ಲಿಂ ವಿರೋಧಿ ದಾಳಿ ನಡೆದದ್ದು ಯಾವ ಸರ್ಕಾರದ ಅವಧಿಯಲ್ಲಿ? ಎಂದಾಗಿತ್ತು ಪ್ರಶ್ನೆ. ಕಾಂಗ್ರೆಸ್, ಬಿಜೆಪಿ, ಡೆಮಾಕ್ರಟ್ ಮತ್ತು ರಿಪಬ್ಲಿಕನ್ ಪಕ್ಷ ಎಂಬ ನಾಲ್ಕು ಆಯ್ಕೆಗಳನ್ನೂ ನೀಡಲಾಗಿತ್ತು.

ನಂತರ ಈ ಪ್ರಶ್ನೆ ಅಸಮರ್ಪಕ ಎಂದು ತಿಳಿದಾಗ ಸಿಬಿಎಸ್ಇ ಕ್ಷಮೆಯಾಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದೆ.

Join Whatsapp