ಕೋವಿಡ್ ನಿರ್ಬಂಧ: ಭಾರತ ಸೇರಿದಂತೆ ಹಲವು ದೇಶಗಳ ಪ್ರಯಾಣ ನಿಷೇಧ ಹಿಂಪಡೆದ ಸೌದಿ ಅರೇಬಿಯಾ

Prasthutha|

ರಿಯಾದ್: ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೇರಿದ್ದ ನಿಷೇಧವನ್ನು ಬುಧವಾರ ಹಿಂಪಡೆಯಲಾಗಿದೆ ಎಂದು ಹೇಳಲಾಗಿದೆ.

- Advertisement -

ಈ ಆದೇಶದಿಂದಾಗಿ ಭಾರತ, ಈಜಿಪ್ಟ್, ಪಾಕಿಸ್ತಾನ, ಇಂಡೋನೇಷ್ಯಾ, ಬ್ರೆಝಿಲ್ ಮತ್ತು ವಿಯೆಟ್ನಾಂ ರಾಷ್ಟ್ರಗಳ ಪ್ರಯಾಣಿಕರು ಸೌದಿ ಪ್ರವೇಶಿಸುವ ಮುನ್ನ 14 ದಿನಗಳ ಕ್ವಾರಂಟೈನ್ ಇಲ್ಲದೆಯೇ ತಲುಪಬಹುದು.

ಸೌದಿ ಪ್ರಯಾಣಿಸುವವರಿಗೆ ಆರೋಗ್ಯ ಇಲಾಖೆಯಿಂದ ಮಾನ್ಯತೆ ಪಡೆದ PCR ಪ್ರಮಾಣಪತ್ರ ಕಡ್ಡಾಯವಾಗಲಿದೆ ಮತ್ತು ಪ್ರಯಾಣದ 72 ಗಂಟೆಗಳ ಮೊದಲು ಆನ್ ಲೈನ್ ನಲ್ಲಿ ನೋಂದಣಿ ಮಾಡಿರಬೇಕು.

Join Whatsapp