ನರೇಂದ್ರ ನಾಯಕ್ ವಿರೋಧದ ಬೆನ್ನಲ್ಲೇ ‘ಮಿಡ್ ಬ್ರೈನ್ ಆಕ್ಟಿವೇಶನ್’ ಹಿಂಪಡೆದ ಸೋನಿ ಟಿವಿ

Prasthutha|

ಮುಂಬೈ: ಜನಪ್ರಿಯ ಟಿವಿ ಕಾರ್ಯಕ್ರಮ ಕೌನ್ ಬನೇಗಾ ಕರೋಡ್’ಪತಿಯ ‘ಮಿಡ್ ಬ್ರೈನ್ ಆಕ್ಟಿವೇಶನ್’ ವಿಶೇಷ ಸಂಚಿಕೆಯನ್ನು ಸೋನಿ ಟಿವಿ ಹಿಂಪಡೆದಿದೆ.

- Advertisement -

‘ಮಿಡ್ ಬ್ರೈನ್ ಆಕ್ಟಿವೇಶನ್’ ಎಪಿಸೋಡ್’ಗಳು ಅವೈಜ್ಙಾನಿಕವಾಗಿದ್ದು, ಕಾರ್ಯಕ್ರಮವು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ ಎಂದು ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕ್, ಕಾರ್ಯಕ್ರಮ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ವಿಶೇಷ ಸಂಚಿಕೆಯನ್ನು ವಾಪಾಸ್ ಪಡೆಯಲಾಗಿದೆ.

ಕೌನ್ ಬನೇಗಾ ಕರೋಡ್ ಪತಿ – ಸೀಸನ್ 13ರ 62ನೇ ‘ಮಿಡ್ ಬ್ರೈನ್ ಆಕ್ಟಿವೇಶನ್’ ವಿಶೇಷ ಸಂಚಿಕೆಯಲ್ಲಿ ಬಾಲಕಿಯೊಬ್ಬಳು ಕಣ್ಣು ಮುಚ್ಚಿ ಕೇವಲ ವಾಸನೆಯಿಂದಲೇ ಪುಸ್ತಕವನ್ನು ಓದುವುದು ಸೇರಿದಂತೆ ಅತೀಂದ್ರಿಯ ಶಕ್ತಿ ಕುರಿತಾಗಿ ಪ್ರಚಾರ ನೀಡುವ ಪ್ರಯತ್ನ ನಡೆಸಲಾಗಿತ್ತು.

- Advertisement -

ಇಂತಹ ಕಾರ್ಯಕ್ರಮಗಳು ಮನುಷ್ಯರ ಸಾಮಾನ್ಯ ತಿಳುವಳಿಕೆಯನ್ನೇ ಪ್ರಶ್ನಿಸಿದಂತಾಗುತ್ತದೆ.  ಮೆದುಳನ್ನು ವಿಶೇಷ ಅನುಭವಗಳಿಗೆ ಜಾಗೃತಗೊಳಿಸುವ ಅರ್ಥವನ್ನು ನೀಡುವ ಈ ಸಂಚಿಕೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಮಂಗಳೂರು ಮೂಲದ ವಿಚಾರವಾದಿ ನರೇಂದ್ರ ನಾಯಕ್ ಅವರು ಕಾರ್ಯಕ್ರಮ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ ಪತ್ರ ಬರೆದಿದ್ದರು

ಅತೀಂದ್ರಿಯ ಶಕ್ತಿ ಕುರಿತಾಗಿ ಪ್ರಚಾರ ನೀಡುವುದನ್ನು ಪ್ರಶ್ನಿಸಿದ್ದ ಅಖಿಲ ಭಾರತ ವಿಚಾರವಾದಿಗಳ ಸಂಘದ ಅಧ್ಯಕ್ಷರಾಗಿರುವ ನರೇಂದ್ರ ನಾಯಕ್, ಹಾಗೊಂದು ವೇಳೆ ಅತೀಂದ್ರಿಯ ಶಕ್ತಿ ನಿಜಕ್ಕೂ ಎಂದಿದಲ್ಲಿ ಅದೊಂದು ಅತ್ಯದ್ಭುತ ಆವಿಷ್ಕಾರವಾಗುತ್ತಿತ್ತು. ಅದಕ್ಕೆ ನೊಬೆಲ್ ಪ್ರಶಸ್ತಿ ಕೊಡುತ್ತಿದ್ದರು ಎಂದು ನಾಯಕ್ ತಿಳಿಸಿದ್ದರು.

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಸಂಘಟಕರು ನರೇಂದ್ರ ನಾಯಕ್ ಅವರಿಗೆ ಇಮೇಲ್ ಮೂಲಕ ತಾವು ಆ ವಿಶೇಷ ಸಂಚಿಕೆಯನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಕಾರ್ಯಕ್ರಮದ ತುಣುಕುಗಳನ್ನು ಹಿಂಪಡೆದಿದೆ.



Join Whatsapp