ಐಪಿಎಲ್-2022: ಧೋನಿ, ರೋಹಿತ್, ಕೊಹ್ಲಿಯನ್ನು ಉಳಿಸಿಕೊಂಡ ಫ್ರಾಂಚೈಸಿಗಳು

Prasthutha: November 30, 2021

ಮೆಗಾ ಹರಾಜಿನತ್ತ ರಾಹುಲ್, ರಷೀದ್ ಖಾನ್, ಹಾರ್ದಿಕ್ ಪಾಂಡ್ಯ ಚಿತ್ತ !

ನವದೆಹಲಿ: ಐಪಿಎಲ್-2022 ಆರಂಭಕ್ಕೂ ಮುನ್ನ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು 8 ತಂಡಗಳು ಅಂತಿಮಗೊಳಿಸಿವೆ. ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ತಂಡಗಳು ನಿರೀಕ್ಷಿತ ಪಟ್ಟಿಯನ್ನೇ ಅಂತಿಮಗೊಳಿಸಿವೆ. ಆದರೆ ಹೈದ್ರಾಬಾದ್ ಹಾಗೂ ಪಂಜಾಬ್ ನಡೆ ಅಚ್ಚರಿ ಮೂಡಿಸಿವೆ. ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಮಂಗಳವಾರ ಅಂತಿಮ ದಿನವಾಗಿತ್ತು.

ನಿರೀಕ್ಷೆಯಂತೆಯೇ ಎಂಎಸ್ ಧೋನಿ, ರೋಹಿತ್ ಶರ್ಮಾ, ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್’ರನ್ನು ಆಯಾಯ ಫ್ರಾಂಚೈಸಿಗಳು ಉಳಿಸಿಕೊಂಡಿದೆ. ಆದರೆ ಅಚ್ಚರಿಯೆಂಬಂತೆ ಇಯಾನ್ ಮಾರ್ಗನ್, ಡೇವಿಡ್ ವಾರ್ನರ್, ಕೆ ಎಲ್ ರಾಹುಲ್, ಯುಜವೇಂದ್ರ ಚಹಲ್, ಹರ್ಷಲ್ ಪಟೇಲ್, ಶ್ರೇಯಸ್ ಅಯ್ಯರ್, ರಷೀದ್ ಖಾನ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಹೆಸರುಗಳು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿವೆ.

ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ:


ಚೆನ್ನೈ ಸೂಪರ್ ಕಿಂಗ್ಸ್: ಎಂ ಎಸ್ ಧೋನಿ, ಋತುರಾಜ್ ಗಾಯಕ್ವಡ್, ರವೀಂದ್ರ ಜಡೇಜಾ, ಮೊಯೀನ್ ಅಲಿ

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಸೂರ್ಯಕುಮಾರ್ ಯಾದವ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಮೊಹಮ್ಮದ್ ಸಿರಾಜ್.
ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್, ಆನ್ರಿಕ್ ನೋರ್ಟಿಯಾ.
ಕೋಲ್ಕತಾ ನೈಟ್ ರೈಡರ್ಸ್: ಸುನೀಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್.
ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್, ಅಬ್ದುಲ್ ಸಮದ್,
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್
ಪಂಜಾಬ್ ಕಿಂಗ್ಸ್: ಮಯಂಕ್ ಅಗರ್ವಾಲ್, ಅರ್ಷ್​ದೀಪ್ ಸಿಂಗ್,.

ಐಪಿಎಲ್ 2022 ಟೂರ್ನಿಗೆ ಪ್ರತೀ ತಂಡಕ್ಕೂ ಆಟಗಾರರ ಖರೀದಿಗೆ 90 ಕೋಟಿ ರೂ ವ್ಯಯಿಸುವ ಅವಕಾಶ ನೀಡಲಾಗಿದೆ. ಇದರಲ್ಲಿ ಹಾಲಿ ಆಟಗಾರರನ್ನ ಉಳಿಸಿಕೊಳ್ಳಲು ಗರಿಷ್ಠ 42 ಕೋಟಿ ನಿಗದಿ ಮಾಡಲಾಗಿದೆ. ನಾಲ್ವರು ಆಟಗಾರರನ್ನ ರೀಟೈನ್ ಮಾಡಿದರೆ 42 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಮೊದಲ ಆಟಗಾರನಿಗೆ 14-16 ಕೋಟಿ ರೂ, ಎರಡನೇ ಆಟಗಾರನಿಗೆ 10-12 ಕೋಟಿ, ಮೂರನೇ ಆಟಗಾರನಿಗೆ 7-8 ಕೋಟಿ, ನಾಲ್ಕನೇ ಆಟಗಾರನಿಗೆ 6 ಕೋಟಿ ರೂ ತೆರಬೇಕಾಗುತ್ತದೆ.

ಒಂದು ವೇಳೆ ಉಳಿಸಿಕೊಳ್ಳುವ ಆಟಗಾರನಿಗೆ ಒಂದು ತಂಡ ಹೆಚ್ಚು ಹಣ ಕೊಡಲು ಮುಂದಾದರೆ ಅದು ಒಟ್ಟು ಟೀಮ್ ಬಜೆಟ್​ನಿಂದಲೇ ವ್ಯಯಿಸಬೇಕಾಗುತ್ತದೆ. ಉಳಿಸಿಕೊಂಡ ನಾಲ್ವರು ಆಟಗಾರರಿಗೆ ಒಂದು ತಂಡ 50 ಕೋಟಿ ರೂ ವ್ಯಯಿಸಿದರೆ, ಇತರ ಆಟಗಾರರ ಖರೀದಿಗೆ ಉಳಿದುಕೊಳ್ಳುವುದು ಕೇವಲ 40 ಕೋಟಿ ರೂ ಮಾತ್ರ.


ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!