370ನೇ ವಿಧಿ ರದ್ದಾಗಲು ಮೆಹಬೂಬಾ ಮುಫ್ತಿ ನೇರ ಕಾರಣ: ಉಮರ್ ಅಬ್ದುಲ್ಲಾ ವಾಗ್ದಾಳಿ

Prasthutha|

ಜಮ್ಮು ಕಾಶ್ಮೀರ: ರಾಜ್ಯದಲ್ಲಿ 370ನೇ ವಿಧಿ ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು PDP ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನೇರ ಕಾರಣ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಉಮರ್ ಅಬ್ದುಲ್ಲಾ ವಾಗ್ದಾಳಿ ನಡಸಿದ್ದಾರೆ.

- Advertisement -

ಜಮ್ಮು ಕಾಶ್ಮೀರದ ಚತ್ರೂನಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅಬ್ದುಲ್ಲಾ, ನಮ್ಮ ದೌರ್ಬಲ್ಯದ ಲಾಭವನ್ನು ಬಿಜೆಪಿಯು ವ್ಯವಸ್ಥಿತವಾಗಿ ಬಳಸಿಕೊಂಡಿತು ಎಂದು ಹೇಳಿದ್ದಾರೆ. 2014ರ ವಿಧಾನಸಭಾ ಚುನಾವಣೆಯ ವೇಳೆ PDP ಮುಖ್ಯಸ್ಥ ಮುಫ್ತಿ ಮುಹಮ್ಮದ್ ಸಯ್ಯದ್ ಅವರಿಗೆ ನಮ್ಮ ಪಕ್ಷವು ಬೇಷರತ್ ಬೆಂಬಲ ಘೋಷಿಸಿತ್ತು. ಬಿಜೆಪಿಯೊಂದಿಗೆ ಸಖ್ಯ ಮಾಡಿದರೆ ಭವಿಷ್ಯದಲ್ಲಿ ಕಾಶ್ಮೀರದ ಜನೆತೆ ಎದುರಿಸಬೇಕಾದ ವಿಪತ್ತಿನ ಕುರಿತು ನಾವು ಮುಫ್ತಿ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಅಧಿಕಾರದ ಯಾವುದೇ ಷರತ್ತುಗಳನ್ನ ವಿಧಿಸದೇ ಒಟ್ಟಾಗಿ ಚುನಾವಣೆ ಎದುರಿಸಲು ಮನವಿ ಮಾಡಿದ್ದೆ. ಆದರೆ ನಮ್ಮ ಮನವಿಗೆ ಅವರು ಸ್ಪಂದಿಸಲಿಲ್ಲ ಮಾಜಿ ಸಿಎಂ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಸುಂದರ ಭವಿಷ್ಯವು ಸಂವಿಧಾನ ಬದ್ಧವಾಗಿ ದೊರೆತಿರುವ ವಿಶೇಷ ಸ್ಥಾನಮಾನದ ಮೇಲೆ ನೆಲೆನಿಂತಿದೆ. 370ನೇ ವಿಧಿ ಮರು ಸ್ಥಾಪನೆಗೆ ನಮ್ಮ ಪಕ್ಷ ಏಕಾಂಗಿಯಾಗಿ ನಿರಂತರವಾಗಿ ಹೋರಾಡಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಮೌನವನ್ನು ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡ ಉಮರ್ ಅಬ್ದುಲ್ಲಾ ಸೋಮವಾರ ಟೀಕಿಸಿದ್ದರು.

Join Whatsapp