ಕುವೈತ್ ಪ್ರಧಾನಿಯಾಗಿ ಶೇಖ್ ಸಬಾ ಅಲ್ ಖಲೀದ್ ಮರು ನೇಮಕ

Prasthutha|

ದುಬೈ: ಕುವೈತ್ ಪ್ರಧಾನಿಯಾಗಿ ಶೇಖ್ ಸಬಾ ಅಲ್ ಖಲೀದ್ ಅಲ್ ಸಬಾ ಅವರು ಮರುನೇಮಕಗೊಂಡಿದ್ದಾರೆ.

- Advertisement -


ಕುವೈತ್ ನ ರಾಜ ಈ ಕುರಿತು ಆದೇಶ ಹೊರಡಿಸಿದ್ದು, ರಾಜಕೀಯ ಅನಿಶ್ಚಿತತೆಯ ನಡುವೆಯೇ ಸಂಪುಟವನ್ನು ರಚಿಸುವ ಸವಾಲು ಖಲೀದ್ ಮೇಲಿದೆ ಎಂದು ಹೇಳಲಾಗುತ್ತಿದೆ.


ಚುನಾಯಿತ ಸಂಸತ್ತಿನ ಜೊತೆಗಿನ ರಾಜಕೀಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ಸರ್ಕಾರ ನವೆಂಬರ್ 8ರಂದು ರಾಜೀನಾಮೆ ಸಲ್ಲಿಸಿತ್ತು. ಕುವೈತ್ ನ ರಾಜ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ ಎಂದು ಸರ್ಕಾರದ ಅಧಿಕೃತ ಮಾಧ್ಯಮ K.U.N.A ವರದಿ ಮಾಡಿದೆ. ಶೇಖ್ ಸಭಾ ಅವರು 2019ರಿಂದಲೂ ಪ್ರಧಾನಿ ಸ್ಥಾನದಲ್ಲಿ ಇದ್ದಾರೆ.

- Advertisement -

ಸರ್ಕಾರದ ರಾಜೀನಾಮೆ ಬಳಿಕ ದೊರೆ ಶೇಖ್ ನವಾಬ್ ಅಲ್ ಅಹ್ಮದ್ ಅಲ್ ಸಬಾ ಅವರು ಕೆಲ ಸಾಂವಿಧಾನಿಕ ಅಧಿಕಾರವನ್ನು ರಾಜ ಶೇಖ್ ಮೆಷಲ್ ಅಲ್ ಅಹ್ಮದ್ ಅಲ್ ಸಬಾ ಅವರಿಗೆ ವಹಿಸಿದ್ದರು. ಇದರಲ್ಲಿ ಪ್ರಧಾನಿ ನೇಮಕ ಹೊಣೆಯೂ ಸೇರಿತ್ತು.
ಕೋವಿಡ್ ಪರಿಸ್ಥಿತಿ ನಿರ್ವಹಣೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ವಿರೋಧ ಪಕ್ಷದ ವಿವಿಧ ಸಂಸದರು ಪ್ರಧಾನಿ ಅವರ ಕಾರ್ಯವೈಖರಿ ಪ್ರಶ್ನಿಸಿದ್ದರು. ಇದರಿಂದಾಗಿ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿತ್ತು.

ರಾಜಕೀಯ ಅಸ್ಥಿರತೆಯು ಶಾಸಕಾಂಗದ ಕಾರ್ಯವೈಖರಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿತ್ತು. ಹಣಕಾಸು ಸುಧಾರಣೆ ಕ್ರಮಗಳು ಏರುಪೇರಾಗಿತ್ತು. 20–21 ಹಣಕಾಸು ವರ್ಷದಲ್ಲಿ ಕೋವಿಡ್ ನಿಂದಾಗಿ ಕುವೈತ್ನ ಜಿಡಿಪಿ ಶೇ 15.4ರಷ್ಟು ಕುಸಿದಿತ್ತು.



Join Whatsapp