ಹತ್ರಾಸ್ ಪ್ರಕರಣ : ಸಂತ್ರಸ್ತೆಯ ಕುಟುಂಬ, ಸಾಕ್ಷಿಗಳಿಗೆ ರಕ್ಷಣೆ ಒದಗಿಸುವಂತೆ ಕೇಂದ್ರೀಯ ಮೀಸಲು ಪಡೆಗೆ ಆದೇಶಿಸಿದ ಸುಪ್ರೀಂ

Prasthutha|

ನವದೆಹಲಿ : ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ 19ರ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂತ್ರಸ್ತರ ಕುಟುಂಬ ಮತ್ತು ಸಾಕ್ಷಿಗಳಿಗೆ ವಾರದೊಳಗೆ ರಕ್ಷಣೆ ಒದಗಿಸುವಂತೆ ಕೇಂದ್ರೀಯ ಮೀಸಲು ಪಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

- Advertisement -

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನೊಳಗೊಂಡ ಪೀಠ, ಸಂತ್ರಸ್ತೆಯ ಕುಟುಂಬ ಮತ್ತು ಸಾಕ್ಷಿಗಳ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ಕ್ರಮ ತೆಗೆದುಕೊಂಡಿರುವುದು ತನಗೆ ಮನವರಿಕೆಯಗಿದೆ. ಆದರೆ ಈ ರೀತಿಯ ವಿಷಯದಲ್ಲಿ ಗ್ರಹಿಕೆ ಮತ್ತು ನಿರಾಶವಾದವನ್ನು ಪರಿಹರಿಸುವ ಅಗತ್ಯವಿದೆ ಎಂದಿದೆ.

“ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ನ ಭದ್ರತಾ ಸಿಬ್ಬಂದಿಯ ಗೌರವಕ್ಕೆ ಧಕ್ಕೆ ತರದೆ ಎಲ್ಲಾ ಆತಂಕಗಳನ್ನು ನೀಗಿಸುವುದಕ್ಕಾಗಿ ಮತ್ತು ಕೇವಲ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ರಮವಾಗಿ ಇಂದಿನಿಂದ ಒಂದು ವಾರದೊಳಗಾಗಿ ಸಂತ್ರಸ್ತೆಯ ಕುಟುಂಬ ಮತ್ತು ಸಾಕ್ಷಿಗಳಿಗೆ ಸಿ.ಆರ್.ಪಿ.ಎಫ್ ಭದ್ರತೆಯನ್ನು ಒದಗಿಸಬೇಕೆಂದು ಆದೇಶಿಸುವುದು ಸರಿಯೆಂದು ನಾವು ಶೋಧಿಸಿದ್ದೇವೆ” ಎಂದು ಪೀಠವು ಹೇಳಿದೆ



Join Whatsapp