ಫೇಸ್ ಬುಕ್ ಭಾರತೀಯ ಉನ್ನತಾಧಿಕಾರಿ ಅಂಕಿದಾಸ್ ರಾಜೀನಾಮೆ

Prasthutha|

ನವದೆಹಲಿ : ಪ್ರಚೋದನಕಾರಿ ಭಾಷಣಗಳನ್ನು ನಿರ್ವಹಿಸುವಲ್ಲಿ ಪಕ್ಷಪಾತವೆಸಗಿರುವ ಆರೋಪ ತೀವ್ರವಾಗಿ ಕೇಳಿ ಬಂದ ಬೆನ್ನಿಗೆ ಫೇಸ್ಬುಕ್ ನ ಭಾರತೀಯ ಉನ್ನತಾಧಿಕಾರಿ ಅಂಕಿದಾಸ್ ಅವರು ರಾಜೀನಾಮೆ ನೀಡಿದ್ದಾರೆ.

- Advertisement -

ದ್ವೇಷಪೂರ್ಣ ಭಾಷಣದ ನಿಯಮಾವಳಿ ಪ್ರಕಾರ ಕ್ರಮ ಜರಗಿಸುವುದನ್ನು ಫೇಸ್ ಬುಕ್ ಭಾರತದ ಉನ್ನತಾಧಿಕಾರಿ ಅಂಕಿದಾಸ್ ತಡೆದಿದ್ದಾರೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಆಗಸ್ಟ್ ನಲ್ಲಿ ಪ್ರಕಟಿಸಿತ್ತು.

ಇದೇ ವಿಚಾರವಾಗಿ ಕಂಪೆನಿಯ ಸಿಬ್ಬಂದಿಗಳು ಮತ್ತು ಸರ್ಕಾರದ ಕಡೆಯಿಂದ ಆಕೆ ಪ್ರಶ್ನೆಗಳನ್ನು ಎದುರಿಸಿದ್ದು, ಬೃಹತ್ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ರಾಜಕೀಯ ವಿಷಯವನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂದು ಪ್ರಶ್ನಿಸಲಾಗಿತ್ತು. ಇದು ನಡೆದ ಒಂದು ವಾರದ ಬಳಿಕ ಆಕೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

- Advertisement -

ಕಳೆದವಾರ ಸಂಸದೀಯ ಸಮಿತಿ ಮುಂದೆ ಹಾಜರಾದ ಅಂಕಿದಾಸ್ ರನ್ನು ಡೇಟಾ ಗೌಪ್ಯತೆಯ ಸಂಬಂಧಿಸಿದಂತೆ ಎರಡುಗಂಟೆಗಳ ಕಾಲ ಪ್ರಶ್ನಿಸಲಾಗಿದೆ. ಸಂಸದೀಯ ಸಮಿತಿಯು ಈ ಬಗ್ಗೆ ಪೇಸ್ ಬುಕ್ ಗೆ ಸಮನ್ಸ್ ಕೂಡಾ ಜಾರಿ ಮಾಡಿತ್ತು, ಈ ಬಗ್ಗೆ ಪ್ರತಿಕ್ರಿಯಿಸಿದ ಫೇಸ್ ಬುಕ್ ಜಾಹೀರಾತಿನಲ್ಲಿ ನಾಗರಿಕರ ವೈಯಕ್ತಿಕ ಡೇಟಾವನ್ನು “ತಾರ್ಕಿಕ” ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.  ಬಿಜೆಪಿಯೊಂದಿಗಿನ ಸಂಬಂಧ ಕೆಡದಿರಲು ಅವರು ಈ ರೀತಿ ಮಾಡಿದ್ದರು ಎಂಬ ಮಾತು ಕೇಳಿ ಬಂದಿದೆ.

Join Whatsapp