ಸುಪ್ರೀಂ ಕೋರ್ಟ್ ಆನ್‌ಲೈನ್ ವಿಚಾರಣೆಯಲ್ಲಿ ಅಂಗಿ ಧರಿಸದೆ ಭಾಗವಹಿಸಿದ ವಕೀಲ: “ಕ್ಷಮಿಸಲಾರದ ತಪ್ಪು” ಎಂದ ನ್ಯಾಯಾಧೀಶರು

Prasthutha|

ಸುಪ್ರೀಂ ಕೋರ್ಟಿನ ವರ್ಚುವಲ್ ವಿಚಾರಣೆ ಸಂದರ್ಭದಲ್ಲಿ ವಕೀಲರೊಬ್ಬರು ಸ್ಕ್ರೀನ್ ನಲ್ಲಿ ಶರ್ಟು ಹಾಕದೆ ಕಾಣಿಸಿಕೊಂಡಿದ್ದಾರೆ. ಸುದರ್ಶನ್ ಟಿವಿ ಪ್ರಕರಣದ ವಿಚಾರಣೆಯ ವೇಳೆ ವಕೀಲರು ಅಂಗಿ ಧರಿಸದೆ ಆನ್ ಲೈನ್ ಗೆ ಬಂದಿದ್ದರು. ನಂತರ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಸೂಚನೆಯ ಮೇರೆಗೆ ವಕೀಲರು ಅಂಗಿ ಧರಿಸಿ ಬಂದಿದ್ದಾರೆ.
ಹಿಂದುತ್ವ ವೆಬ್ ಸೈಟ್ ‘ಆಪ್ ಇಂಡಿಯಾ’ ವನ್ನು ಪ್ರತಿನಿಧಿಸುತ್ತಿರುವ ವಕೀಲರು ಶರ್ಟು ಹಾಕದೆ ನ್ಯಾಯಾಲಯಕ್ಕೆ ಹಾಜರಾಗಿದ್ದು. ವಕೀಲರ ಕ್ರಮ ನ್ಯಾಯಾಲಯಕ್ಕೆ ಮಾಡಿದ ಅಪಮಾನ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ. ನ್ಯಾಯಪೀಠದಲ್ಲಿ ಹಾಜರಿದ್ದ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ, ಇದು ಕ್ಷಮಿಸಲಾಗದ ತಪ್ಪು ಎಂದು ಹೇಳಿದ್ದಾರೆ.

- Advertisement -


ಸುಪ್ರೀಂ ಕೋರ್ಟಿನ ಆನ್‌ಲೈನ್ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ನಿಯಮಗಳನ್ನು ಉಲ್ಲಂಘಿಸುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸುಪ್ರೀಂ ಕೋರ್ಟಿನ ಆನ್‌ಲೈನ್ ವಿಚಾರಣೆ ಸಂದರ್ಭದಲ್ಲಿ ಹಿರಿಯ ವಕೀಲರೊಬ್ಬರು ಧೂಮಪಾನ ಮಾಡಿ ವಿವಾದ ಸೃಷ್ಟಿಸಿದ್ದರು.
ಈ ಹಿಂದೆ ರಾಜಸ್ಥಾನ್ ಹೈಕೋರ್ಟಿನಲ್ಲಿ ಆನ್‌ಲೈನ್ ವಾದದ ವೇಳೆ ವಕೀಲರೊಬ್ಬರು ಒಳ ಉಡುಪು ಧರಿಸಿ ಹಾಜರಾಗಿದ್ದರು. ಆ ಸಮಯದಲ್ಲಿ ಹೈಕೋರ್ಟಿನ ನ್ಯಾಯಾಧೀಶರು ಕೋವಿಡ್ ಅವಧಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವ ಸಮಯದಲ್ಲೂ ವಕೀಲರು ಸರಿಯಾದ ಸಮವಸ್ತ್ರವನ್ನು ಧರಿಸಬೇಕೆಂದು ಸೂಚಿಸಿದ್ದರು. ಆನ್‌ಲೈನ್ ವಿಚಾರಣೆಯ ವೇಳೆ ಧೂಮಪಾನ ಮಾಡಿದ್ದ ವಕೀಲರಿಗೆ ಗುಜರಾತ್ ಹೈಕೋರ್ಟ್ 10,000ರೂ ದಂಡ ವಿಧಿಸಿತ್ತು.



Join Whatsapp