ಜಮ್ಮು-ಕಾಶ್ಮೀರಾದಲ್ಲಿ ಭೂಖರೀದಿಯ ಮೇಲೆ ನಿರ್ಬಂಧ ತೆರವುಗೊಳಿಸಿದ ಕೇಂದ್ರ ಸರಕಾರ

Prasthutha|

►► ಜಮ್ಮು-ಕಾಶ್ಮೀರ ಮಾರಾಟಕ್ಕಿದೆ ಎಂದು ಟೀಕಿಸಿದ ಒಮರ್ ಅಬ್ದುಲ್ಲಾ

- Advertisement -

ಹೊಸದಿಲ್ಲಿ:  ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗಾಗಿ ಗೃಹ ಸಚಿವಾಲಯವು ಹೊಸ ಭೂ ಕಾನೂನೊಂದನ್ನು ಜಾರಿಗೆ ತಂದಿದೆ.

ಈ ಹೊಸ ಕಾನೂನಿನೊಂದಿಗೆ ಈ ಪ್ರದೇಶದಲ್ಲಿ ಭಾರತದ ಯಾವುದೇ ನಾಗರಿಕ ಭೂಮಿಯನ್ನು ಖರೀದಿಸಬಹುದಾಗಿದೆ. ಈ ಹಿಂದೆ 370ನೆ ವಿಧಿಯಡಿ ಇಲ್ಲಿನ ಖಾಯಂ ನಿವಾಸಿಗಳಿಗೆ ಮಾತ್ರ ಈ ಅವಕಾಶವಿತ್ತು.

- Advertisement -

ಹೊಸ ಕಾನೂನನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮರುಸಂಘಟನೆ (ಕೆಂದ್ರ ಕಾನೂನುಗಳ ರೂಪಾಂತರ) ತೃತೀಯ ಆದೇಶ, 2020 ಎಂದು ಕರೆಯಲಾಗುವುದೆಂದು ಗೃಹ ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಕಾನೂನು ತಕ್ಷಣದಿಂದಲೇ ಅನುಷ್ಠಾನಕ್ಕೆ ಬರಲಿದೆ.

“ರಾಜ್ಯದ ಖಾಯಂ ನಿವಾಸಿಗಳು” ಎಂಬ ಉಪವಾಕ್ಯವನ್ನು ಇದರಿಂದ ಕೈಬಿಡಲಾಗಿದೆ. ಇದರಡಿ 12 ರಾಜ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಬದಲಾವಣೆಗಳೊಂದಿಗೆ 26 ಇತರ ಕಾನೂನುಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಕಾನೂನಿನಲ್ಲಿ ಹಲವು ವಿನಾಯಿತಿಗಳಿದ್ದು, ಕೃಷಿ ಭೂಮಿಯನ್ನು ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸೇರಿದಂತೆ ಕೃಷಿಯೇತರ ಉದ್ದೇಶಗಳಿಗಾಗಿ ಬಳಸಬಹುದಾಗಿದೆ.

ಈ ಹಿಂದೆ ಕಾಶ್ಮೀರ ವಿಶೇಷಾಧಿಕಾರವನ್ನು ರದ್ದುಗೊಳಿಸುವ ಮೊದಲು ಸ್ಥಳೀಯರನ್ನು ಹೊರತುಪಡಿಸಿ ಇತರರಿಗೆ ಕಾಶ್ಮೀರದಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವುದು ಸಾಧ್ಯವಿರಲಿಲ್ಲ.

“ಜಮ್ಮು ಕಾಶ್ಮೀರದಲ್ಲಿ ಭೂಮಾಲೀಕತ್ವ ಕಾಯ್ದೆಗೆ ತರಲಾದ ತಿದ್ದುಪಡಿಯನ್ನು ಒಪ್ಪಿಕೊಳ್ಳುವಂತಿಲ್ಲ. ಜಮ್ಮು-ಕಾಶ್ಮೀರ ಇದೀಗ ಮಾರಾಟಕ್ಕಿದೆ. ಕಡಿಮೆ ಭೂಮಿ ಹೊಂದಿದ ಬಡವರು ಸಂಕಷ್ಟಕ್ಕೀಡಾಗಲಿದ್ದಾರೆ” ಎಂದು ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ.

Join Whatsapp