ಕ್ಸಿ ಜಿನ್ ಪಿನ್ ಮೂರನೇ ಬಾರಿಗೆ ಚೀನಾ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯ ಕೈಗೊಂಡ ಕಮ್ಯುನಿಷ್ಟ್ ಪಕ್ಷ

Prasthutha|

ಚೀನಾ : ಚೀನಾದಲ್ಲಿ ಆಡಳಿತಾರೂಢ ಕಮ್ಯುನಿಷ್ಟ್ ಪಕ್ಷ, ಹಾಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಾಖಲೆಯ ಮೂರನೇ ಅವಧಿಗೂ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡುವಂತೆ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿದೆ. ಕಮ್ಯುನಿಷ್ಟ್ ಪಕ್ಷದ ಕೇಂದ್ರೀಯ ಸಮಿತಿಯು ಸಭೆ ನಡೆಸಿ ಈ ನಿರ್ಣಯ ತೆಗೆದುಕೊಂಡಿದೆ.

- Advertisement -


ಕ್ಸಿ ಜಿನ್ಪಿಂಗ್ ಅವಧಿಯಲ್ಲಿ ಕೈಗೊಂಡ ಮಹತ್ವದ ತೀರ್ಮಾನ, ಸಮಾಜವಾದದ ನವೋದಯ ಮುಂತಾದ ಹಲವು ವಿಷಯಗಳ ಮೇಲೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಅಲ್ಲದೆ, ಕ್ಸಿ ಜಿನ್ಪಿಂಗ್ ಅವರೇ ಸದ್ಯದ ಶಕ್ತಿಶಾಲಿ ನಾಯಕ ಎಂದು 400 ಸದಸ್ಯರುಳ್ಳ ಉನ್ನತ ಸಮಿತಿಯು ಒಪ್ಪಿಕೊಂಡಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ, ಕೇಂದ್ರೀಯ ಸೇನಾ ಆಯೋಗದ ಅಧ್ಯಕ್ಷ ಮತ್ತು ದೇಶದ ಅಧ್ಯಕ್ಷ ಈ ಮೂರೂ ಪ್ರಭಾವಿ ಹುದ್ದೆಗಳನ್ನು 68 ವರ್ಷದ ಜಿನ್ಪಿಂಗ್ ಹೊಂದಿದ್ದಾರೆ. ಜಿನ್ಪಿಂಗ್ ಎರಡನೇ ಅವಧಿಯು ಮುಂದಿನ ವರ್ಷ ಮುಕ್ತಾಯವಾಗಲಿದೆ. ಗುರುವಾರ ತೆಗೆದುಕೊಂಡ ನಿರ್ಣಯದ ಕುರಿತು 2022ರಲ್ಲಿ ನಡೆಯುವ ಸಿಪಿಸಿಯ ನ್ಯಾಷನಲ್ ಕಾಂಗ್ರೆಸ್ ಸಭೆಯಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ.

ಇದರಲ್ಲಿಯೂ ಇದೇ ನಿರ್ಣಯಕ್ಕೆ ಅವಿರೋಧವಾಗಿ ಅಂಗೀಕಾರ ದೊರೆಯಲಿದ್ದು, ಮೂರನೇ ಬಾರಿಗೆ ಜಿನ್ಪಿಂಗ್ ಅವರೇ ಚೀನಾ ಅಧ್ಯಕ್ಷರಾಗಿ ಮರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಒಬ್ಬರು ಎರಡು ಅವಧಿಗೆ ಮಾತ್ರ ಆಯ್ಕೆಯಾಗುವ ನಿಯಮವನ್ನು 2018ರಲ್ಲಿಯೇ ಬದಲಾಯಿಸಲಾಗಿದೆ. ಹಾಗಾಗಿ ಕ್ಸಿ ಜಿನ್ಪಿಂಗ್ ಅವರು ಚೀನಾ ಅಧ್ಯಕ್ಷರಾಗಿ ಮರು ಆಯ್ಕೆ ಆಗುವುದು ಖಚಿತವಾಗಿದೆ. ಈ ಹಿಂದೆ ಮಾವೋ ಜೆಡಾಂಗ್ ಮಾತ್ರ ಸತತ ಎರಡು ಅವಧಿಗೆ ಅಧ್ಯಕ್ಷರಾಗಿದ್ದರು. ಚೀನಾದಲ್ಲಿ ಅಧ್ಯಕ್ಷರ ಅಧಿಕಾರಾವಧಿ ಐದು ವರ್ಷಗಳಾಗಿವೆ.



Join Whatsapp