ಭಾರತದ ಮಿ.56 ಚೀನಾಕ್ಕೆ ಹೆದರಿದ್ದಾರೆ: ರಾಹುಲ್ ಗಾಂಧಿ

Prasthutha|

ನವದೆಹಲಿ : ಚೀನಾದ ಉಪಟಳ ಕುರಿತು ಭಾರತ ಸರ್ಕಾರದಲ್ಲಿ ಯಾವುದೇ ಕಾರ್ಯತಂತ್ರವನ್ನು ಇಲ್ಲವಾಗಿದ್ದು, ದೇಶದ ರಾಷ್ಟ್ರೀಯ ಭದ್ರತೆಯು ಕ್ಷಮಿಸಲಾಗದಷ್ಟು ರಾಜಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ

- Advertisement -

ನ್ಮ ಆಲೋಚನೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಗಡಿಯನ್ನು ಕಾವಲು ಕಾಯುತ್ತಿರುವ ಸೈನಿಕರ ಕಡೆಯಿದ್ದರೆ, ಭಾರತ ಸರ್ಕಾರಕ್ಕೆ ದೇಶದ ಭದ್ರತೆಯ ಬಗ್ಗೆ ಕಾಳಜಿಯಿಲ್ಲ. ಆದರೆ ಸುಳ್ಳುಗಳನ್ನು ಹೊರಹಾಕುತ್ತಾ ಜನರನ್ನು ಮರುಳುಮಾಡುತ್ತಿದೆ. ನಮ್ಮ ದೇಶದ ಪ್ರಧಾನಿಯವರ 56 ಚಿನ ಎದೆಯಲ್ಲಿ ಚೀನಾ ಕುರಿತ ಭಯವಿದೆ. ಅದು ದೇಶದೊಳಗಡೆ ಹಳ್ಳಿಯನ್ನೇ ನಿರ್ಮಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಚೀನಾ ಗಡಿ ಸಮಸ್ಯೆಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ವಿಭಿನ್ನ ಅಭಿಪ್ರಾಯ ಹೊಂದಿರುವ ವರದಿಯನ್ನೊಂದನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ಚೀನಾವು ಭಾರತೀಯ ಭೂಪ್ರದೇಶವನ್ನು ಅಕ್ರಮವಾಗಿ ಸ್ವಾಧೀನ ಪಡಿಸಿದೆ ಎಂದು ಒಪ್ಪಿಕೊಂಡಿದ್ದು, ಭಾರತವು ‘ನ್ಯಾಯಸಮ್ಮತವಲ್ಲದ ಚೀನೀ ವಾದಗಳನ್ನು ಸ್ವೀಕರಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಇಲಾಖೆ ಹೇಳಿದೆ.

Join Whatsapp