ಮುಂಬೈ: ವಿಶ್ವ ಹಿಂದೂ ಪರಿಷತ್ನಿಂದ ಬೆದರಿಕೆ ಹಿನ್ನೆಲೆಯಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.
ಅಕ್ಟೋಬರ್ 29, 30 ಮತ್ತು 31 ರಂದು ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಫಾರೂಕಿ, “ನನ್ನ ಪ್ರೇಕ್ಷಕರ ಸುರಕ್ಷತೆಯೇ ಮುಖ್ಯ. ನಾನು ಅನುಭವಿಸಿದ ಸನ್ನಿವೇಶಗಳನ್ನು ನನ್ನ ಪ್ರೇಕ್ಷಕರು ಅನುಭವಿಸಬಾರದೆಂಬುದು ನನ್ನ ಬಯಕೆ” ಎಂದು ತಿಳಿಸಿದ್ದಾರೆ.
ಮುಂಬೈನಲ್ಲಿ ಕಾರ್ಯಕ್ರಮವನ್ನು ಘೋಷಿಸಿದ ನಂತರ, ಮುನಾವರ್ ಫಾರೂಕಿ ಅವರಿಗೆ ಹಿಂದೂ ದೇವತೆಗಳನ್ನು ನಿಂದಿಸಿದ್ದಾರೆಂದು ಆರೋಪಿಸಿ ವಿಎಚ್ಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದರು.
‘ನಮ್ಮ ಶ್ರೇಷ್ಠ ಹಿಂದೂ ಧರ್ಮ ಮತ್ತು ಹಿಂದೂ ಪುರೋಹಿತರು ಮತ್ತು ಸನ್ಯಾಸಿಗಳನ್ನು ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಎಲ್ಲಾ ಸ್ವಯಂ ಘೋಷಿತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಗಳಿಗೆ ವಿಎಚ್ಪಿ / ಬಜರಂಗದಳ ಬಲವಾದ ಎಚ್ಚರಿಕೆ ನೀಡುತ್ತಿದೆ. ಕಾನೂನಾತ್ಮಕವಾಗಿ ಅವರಿಗೆ ಪಾಠ ಕಲಿಸಲಾಗುವುದು’ ಎಂದು VHP ವಕ್ತಾರ ಸಿರೀಶ್ ನಾಯರ್ ಟ್ವೀಟ್ ಮಾಡಿದ್ದರು.