ಮುಂಬೈ ಬೃಹತ್ ಕಟ್ಟಡದಲ್ಲಿ ಬೆಂಕಿ ದುರಂತ, ಓರ್ವ ಮೃತ್ಯು, ಹಲವರು ಸಿಕ್ಕಿಕೊಂಡ ಶಂಕೆ

Prasthutha|

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಬೃಹತ್ ಕಟ್ಟಡದದಲ್ಲಿ ಹಲವರು ಸಿಲುಕಿರುವ ಶಂಕೆ ಎದುರಾಗಿದೆ.

- Advertisement -

ಸೆಂಟ್ರಲ್ ಮುಂಬೈನ ಮಾಧವ್ ಪಾಲವ್ ಮಾರ್ಗದಲ್ಲಿರುವ 61 ಅಂತಸ್ತಿನ ಬೃಹತ್ ಅವಿಘ್ನ ಪಾರ್ಕ್ ಕಟ್ಟಡದಲ್ಲಿ ಇಂದು ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ವಸತಿ ಕಟ್ಟಡದ 19ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸುಮಾರು 30 ವರ್ಷದ ಸ್ಥಳೀಯ ನಿವಾಸಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾಲ್ಕನಿಯಿಂದ ಕೆಳಗೆ ಇಳಿಯಲು ಯತ್ನಿಸಿದ್ದು, ಆಯತಪ್ಪಿ ಅವರು ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರಾಣಪಕ್ಷಿ ಹಾರಿಹೋಗಿದೆ.

- Advertisement -

ವಸತಿ ಕಟ್ಟಡವಾದ್ದರಿಂದ ಸಾಕಷ್ಟು ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಹೀಗಾಗಿ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.



Join Whatsapp