ಲಕ್ನೋ: ಬೌದ್ಧ ಧರ್ಮಕ್ಕೆ ಸೇರಿದ ಸ್ತೂಪದ ಮೇಲೆ ನಿರ್ಮಿಸಲಾದ ದೇವಾಲಯವನ್ನು ಬೌದ್ಧ ಧರ್ಮದ ಅನುಯಾಯಿಗಳು ಆಕ್ರಮಿಸಿ ವಶಪಡಿಸಿಕೊಂಡ ಘಟನೆ ಉತ್ತರ ಪ್ರದೇಶದ ಪಾರೂಖಾಬಾದ್ ನಲ್ಲಿ ನಡೆದಿದೆ.
ಮಾತ್ರವಲ್ಲ ಆಕ್ರೋಶಿತ ಯುವಕರ ಗುಂಪೊಂದು ದೇವಾಲಯದ ಮೇಲ್ಛಾವಣಿಗೆ ಹತ್ತಿ ಧ್ವಜಗಳನ್ನು ಕಿತ್ತು ಬೌದ್ಧ ಧರ್ಮಕ್ಕೆ ಸೇರಿದ ಧ್ವಜವನ್ನು ಅಳವಡಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಾಬಲ್ ಎಂಬಲ್ಲಿನ ಹಿಂದೂ ಮತ್ತು ಬೌದ್ಧ ಧರ್ಮ ಅನುಯಾಯಿಗಳು ಸ್ಥಳದಲ್ಲಿ ಜಮಾವಣೆಗೊಂಡು ಪರಸ್ಪರ ಹಿಂಸಾಚಾರಕ್ಕೆ ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೆರಾಪುರಾ ಪೊಲೀಸ್ ಠಾಣೆಯಲ್ಲಿ ಬೌದ್ಧ ಧರ್ಮದ ಅನುಯಾಯಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕ್ರೋಶಿತ ಗುಂಪನ್ನು ಲಘು ಲಾಠಿಚಾರ್ಚ್ ಮೂಲಕ ಪೊಲೀಸರು ಚದುರಿಸಿದ್ದಾರೆ.