ಮುಂಬೈ: ನಟ ಸುಕೇಶ್ ಚಂದ್ರಶೇಖರ್ ಮತ್ತು ಲೀನಾ ಪೌಲ್ ವಿರುದ್ಧದ 200 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಫೋರ್ಟಿಸ್ ಹೆಲ್ತ್ಕೇರ್ ಪ್ರಮೋಟರ್ಸ್ ಶಿವಿಂದರ್ ಸಿಂಗ್ ಅವರ ಕುಟುಂಬವನ್ನು ಸುಮಾರು 200 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಚಂದ್ರಶೇಖರ್ ಮತ್ತು ಪಾಲ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸುಕೇಶ್ ಚಂದ್ರಶೇಖರ್ ಮತ್ತು ಲೀನಾ ಪೌಲ್ ಅವರ ಮೇಲೆ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸುಲಿಗೆ ಆರೋಪ ಹೊರಿಸಿ ಎಫ್ ಐಆರ್ ದಾಖಲಿಸಲಾಗಿದೆ. ಆರೋಪಿಗಳ ಜೊತೆಗಿನ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಫತೇಹಿಗೆ ಫತೇಹಿ ಅವರಿಗೆ ಸಮನ್ಸ್ ನೀಡಿಲಾಗಿದೆ ಎಂದು ಏಜೆನ್ಸಿ ಮೂಲಗಳು ಹೇಳಿವೆ.