ಮಂಗಳೂರು ಸೇರಿದಂತೆ ದ.ಕ ಜಿಲ್ಲಾದ್ಯಂತ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

Prasthutha|

ಮಂಗಳೂರು: ಜಿಲ್ಲಾದ್ಯಂತ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೋಮವಾರದಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಹಾನಿಯಾಗಿದ್ದು, ಮಂಗಳೂರಿನಲ್ಲಿ ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾಗಿದೆ.

- Advertisement -

ನಗರದ ಕೊಟ್ಟಾರಚೌಕಿ, ಮಾಲೆಮಾರ್, ಪಡೀಲ್, ಕುಳೂರು ಪ್ರದೇಶದ ರಸ್ತೆ ಜಲಾವೃತವಾಗಿದೆ.

ರಸ್ತೆ ಜಲಾವೃತ ಹಿನ್ನಲೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸಿದ್ದು, ರಸ್ತೆ ಸಂಚಾರ ಸುಗುಮಗೊಳಿಸಲು ರಸ್ತೆಗಿಳಿದ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಸುಗಮ‌ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

- Advertisement -

ಭಾರೀ ಮಳೆಗೆ ಕುಸಿತಗೊಂಡ ದೇರೆಬೈಲು ರಸ್ತೆ

ನಿನ್ನೆ ದಿನವಿಡೀ ಸುರಿದ ಮಳೆಗೆ ದೇರೆಬೈಲ್ ಲ್ಯಾಂಡ್ ಲಿಂಕ್ಸ್ ಬಳಿ ರಸ್ತೆ ಕುಸಿದಿದೆ.



Join Whatsapp