ಪಾಕಿಸ್ತಾನಕ್ಕೆ ವಲಸೆ ಹೋದ ಮುಸಲ್ಮಾನರಿಗೆ ಗೌರವ, ಸ್ಥಾನಮಾನ ಸಿಗುತ್ತಿಲ್ಲ : ಮೋಹನ್ ಭಾಗವತ್

Prasthutha|

► ನಮಗೆಲ್ಲಾ ಬೇಕಿರುವುದು ಸಾಮರಸ್ಯದ ಸಮಾಜ

- Advertisement -

ನವದೆಹಲಿ: ಪಾಕಿಸ್ತಾನಕ್ಕೆ ಇಲ್ಲಿಂದ ವಲಸೆ ಹೋಗಿರುವ ಮುಸಲ್ಮಾನರಿಗೆ ಅಲ್ಲಿ ಹೆಚ್ಚು ಗೌರವ, ಸ್ಥಾನಮಾನ ಸಿಗುತ್ತಿಲ್ಲ, ಆದರೆ ಇಲ್ಲಿ ಉಳಿದುಕೊಂಡಿರುವ ಭಾರತದ ಮುಸ್ಲಿಮರು ತಮ್ಮ ಧಾರ್ಮಿಕ ಆಚರಣೆ-ವಿಧಿ ವಿಧಾನಗಳನ್ನು ಧೈರ್ಯದಿಂದ ಮಾಡುತ್ತಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನಮಗೆ ಬೇಕಿರುವುದು ಸಾಮರಸ್ಯದ ಸಮಾಜ. ಮತ್ತು ಹಿಂದೂ ಮತ್ತು ಮುಸಲ್ಮಾನರು ಒಂದೇ ಪೂರ್ವಜನರನ್ನು ಹೊಂದಿರುವ ಆಲೋಚನೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವೇಳೆ ನಮ್ಮ ಪೂರ್ವಿಕರಿಗೆ ಇರುತ್ತಿದ್ದರೆ ಭಾರತ ಇಬ್ಭಾಗವಾಗುವುದನ್ನು ತಡೆಯಬಹುದಿತ್ತು ಎಂದು ಹೇಳಿದರು. ಇಲ್ಲಿಂದ ಪಾಕಿಸ್ಥಾನಕ್ಕೆ ವಲಸೆ ಹೋಗಿರುವ ಮುಸ್ಲಿಮರಿಗೆ ಅಲ್ಲಿ ಹೆಚ್ಚು ಗೌರವ, ಸ್ಥಾನಮಾನವನ್ನು ನಿರಾಕರಿಸಲಾಗಿದೆ ಏಕೆಂದರೆ ಅವರು ಭಾರತಕ್ಕೆ ಸೇರಿದವರು ಮತ್ತು ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

- Advertisement -

ಭಾರತದಲ್ಲಿ ಆರಾಧನಾ ವಿಧಾನದಿಂದ ಯಾರನ್ನೂ ಪ್ರತ್ಯೇಕಿಸಲು ಸಾಧ್ಯವಿಲ್ಲ. ಹಿಂದೂಗಳ ಮತ್ತು ಮುಸ್ಲಿಮರ ಪೂರ್ವಜರು ಒಬ್ಬರೇ ಎಂದರು. ಭಾರತದ ಸನಾತನ ಧರ್ಮದ ಸಂಸ್ಕೃತಿಯು ಮತ್ತು ಹಿಂದುತ್ವ ಉದಾರವಾಗಿದೆ, “ನಾವು ಈ ಸಂಸ್ಕೃತಿಯನ್ನು ಆನುವಂಶಿಕವಾಗಿ ಪಡೆದುಕೊಂಡಿದ್ದೇವೆ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಈ ಪ್ರಕ್ರಿಯೆ ಮುಂದುವರಿದಿದ್ದರೆ, ವಿಭಜನೆಯನ್ನು ನಿಲ್ಲಿಸಲು ಒಂದು ಮಾರ್ಗವಿತ್ತು” ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Join Whatsapp