ಜಕಾರ್ತಾ: ಅಡುಗೆ ಮಾಡುವ ಕುಕ್ಕರನ್ನೇ ಮದುವೆಯಾದ ಅಪರೂಪದ ಘಟನೆ ಇಂಡೋನೇಷ್ಯಾದ ಖೋಯಿರುಲ್ ನಲ್ಲಿ ನಡೆದಿದೆ.
ಅನಾಮ್ ಕುಕ್ಕರನ್ನು ಮದುವೆಯಾದ ವ್ಯಕ್ತಿ.
ನನಗೆ ಮದುವೆಯಾಗಲು ಹೆಣ್ಣು ಬೇಡ ಅನ್ನ ಮಾಡಲು ಬಳಸುವ ಕುಕ್ಕರೇ ನನ್ನ ಮಡದಿ ಎಂದು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ನಾಲ್ಕು ದಿನಗಳ ನಂತರ ಡೈವೋರ್ಸ್ ಮಾಡಿಕೊಂಡಿದ್ದಾನೆ.
ಅನಾಮ್ ವರನ ಉಡುಪು ಧರಿಸಿ, ಜೊತೆಗೆ ಕುಕ್ಕರ್ ಗೂ ವೇಲ್ ಹಾಕಿ ಮುತ್ತಿಟ್ಟಿದ್ದಾನೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.