ಹೊಸದಿಲ್ಲಿ: ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಗಾಂಧಿ ಹಂತಕ ಮತ್ತು ತೀವ್ರ ಹಿಂದುತ್ವವಾದಿ ನಾಥೂರಾಮ್ ವಿನಾಯಕ್ ಗೋಡ್ಸೆಯನ್ನು ಪ್ರಶಂಸಿಸುವ ಟ್ವೀಟ್ ಗಳು ಟ್ರೆಂಡಿಂಗ್ ಆಗಿವೆ.
‘ಗೋಡ್ಸೆ ಜಿಂದಾಬಾದ್’ ಹ್ಯಾಶ್‌ಟ್ಯಾಗ್ ನಲ್ಲಿ ಅನೇಕರು ಗಾಂಧಿಯನ್ನು ಅವಮಾನಿಸಿ ಗೋಡ್ಸೆಯನ್ನು ಪ್ರಶಂಸಿಸುವ ಬರಹಗಳು ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ಗಾಂಧಿ ಹಂತಕ ಗೋಡ್ಸೆಯನ್ನು ಪ್ರಶಂಸಿಸುವುದನ್ನು ವಿರೋಧಿಸಿ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದೆ.