ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ : ಹಿಟ್ & ರನ್ ಗೆ ನರ್ಸಿಂಗ್ ವಿದ್ಯಾರ್ಥಿ ಬಲಿ

Prasthutha|


ಮಂಗಳೂರು: ದ್ವಿ ಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ನರ್ಸಿಂಗ್ ಕಾಲೇಜಿ ವಿದ್ಯಾರ್ಥಿಯೋರ್ವ ಮೃಪಟ್ಟಿರುವ ಘಟನೆ ನಂತೂರು ಬಳಿ ಮಂಗಳವಾರ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಮಹಾರಾಷ್ಟ್ರದ ಪೂನಾ ಮೂಲದ ಮಾನಸ್ ಉಗಾಲೆ (27) ಎಂದು ಗುರುತಿಸಲಾಗಿದೆ.

- Advertisement -


ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಮಾನಸ್ ಅವರು ಇಂದು ಮಧ್ಯಾಹ್ನ ನಂತೂರಿನಿಂದ ಪಂಪ್ ವೆಲ್ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಯಾವುದೋ ವಾಹನ ಹಿಂದಿನಿಂದ ಢಿಕ್ಕಿ ಹೊಡೆದು ಪರಾರಿಯಾಗಿದೆ. ತಲೆಗೆ ತೀವ್ರ ಗಾಯಗೊಂಡ ಮಾನಸ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸೇರಿಸಿದರಾದರೂ ಅವರು ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮಂಗಳೂರು ಪೂರ್ವ (ಕದ್ರಿ) ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Join Whatsapp