ಮೈಸೂರು: ಮೈಸೂರು ನಗರದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿಯರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಕೈಗೊಳ್ಳಬೇಕು ಎಂದು, ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಸೂಚಿಸಿದ್ದಾರೆ.ಅವರು ಇಂದು ಮೈಸೂರು ನಗರ ಪೊಲೀಸ್ ಆಯುಕ್ತ ವ್ಯಾಪ್ತಿಯ ಪರಿಶೀಲನಾ ಸಭೆಯಲ್ಲಿ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ವೀಸಾ ಅವಧಿ ಮೀರಿದ್ದರೂ ದೇಶದಲ್ಲಿ ಉಳಿದಿರುವ ಯಾವುದೇ ವಿದೇಶಿ , ಪ್ರಜೆಗಳಿಂದ ದೇಶದ. ಭದ್ರತೆಯ ದೃಷ್ಟಿಯಿಂದ ಹೊರ ಹಾಕಬೇಕು ಎಂದ ಸಚಿವರು ಬಾಂಗ್ಲಾದೇಶಿ ನಾಗರಿಕರೂ ಹಾಗೂ ರೊಹಿಂಗ್ಯಾ ಮುಸ್ಲಿಮರ ಅಕ್ರಮ ವಾಸ್ತವ್ಯದ ಬಗ್ಗೆಯೂ ನಿಗಾ ವಹಿಸಬೇಕು ಎಂದು ಸಚಿವರು ತಿಳಿಸಿದರು.ಅಕ್ರಮವಾಗಿ ನೆಲಸಿರುವ ವಿದೇಶಿಯರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿ ಪತ್ತೆ ಹಚ್ಚಿ ಕ್ರಮ ಜರುಗಿಸಿ ಎಂದು ಸಚಿವರು ಸಭೆಯಲ್ಲಿ ಸೂಚಿಸಿದರು
ಮೈಸೂರು ನಗರ ಒಂದು ಪ್ರವಾಸಿ ನಗರವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಬೇಕು ಎಂದ ಸಚಿವರು ಇದಕ್ಕಾಗಿ ನಗರದಲ್ಲಿ ಬೀಟ್ ವ್ಯವಸ್ಥೆ ಬಿಗಿಗೊಳಿಸಬೇಕು ಎಂದೂ ಸೂಚಿಸಿದರು. ಮೈಸೂರು ನಗರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾದಕದ್ರವ್ಯ ಜಾಲದ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಸುಮಾರು104 ಮಂದಿಯನ್ನು ಬಂಧಿಸಿದ್ದು, ಮಾದಕ ವಸ್ತುಗಳ ಅವ್ಯವಹಾರ ವನ್ನು ಮೂಲೋತ್ಪಟನೆ ಮಾಡಬೇಕೆಂದು, ತಾಕೀತು ಮಾಡಿದರು. ಆನ್ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು, ಹಾಗೂ ಹಣ ಕಟ್ಟಿ ಆಡುವ ಎಲ್ಲಾ ಗೇಮ್ ಗಳಿಗೆ ನಿಷೇಧ ಹೇರಿ ಕಾಯಿದೆ ರೂಪಿಸಲಾಗಿದೆ, ಎಂದು ಸಚಿವರು ತಿಳಿಸಿದರು.