►ಚಿತ್ರಹಿಂಸೆಗೊಳಗಾದವರ ವಿರುದ್ಧವೇ ಪೊಲೀಸ್ ಕೇಸ್!
ಆಗ್ರಾ: ಉತ್ತರ ಪ್ರದೇಶದ ಮಥುರಾದಲ್ಲಿ ಮುಸ್ಲಿಂ ಯುವಕರ ಮೇಲೆ ಹಿಂದುತ್ವವಾದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಹಲ್ಲೆಗೊಳಗಾದವರನ್ನು ಅಯೂಬ್ (40) ಮತ್ತು ಮೋಸಿಮ್ (23) ಎಂದು ಗುರುತಿಸಲಾಗಿದೆ.
ಹಲ್ಲೆಗೊಳಗಾದ ಮುಸ್ಲಿಂ ಯುವಕರ ವಿರುದ್ಧವೇ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದು, ದೇವಾಲಯಕ್ಕೆ ಅವಮಾನ ಮತ್ತು ಪ್ರಾಣಿಗಳಿಗೆ ಹಿಂಸೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಥುರಾದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯುವಕರ ಕೈಯಲ್ಲಿ ಮಾಂಸ ಇದೆ ಎಂದು ಆರೋಪಿಸಿ 15 ಜನರ ಹಿಂದುತ್ವ ಗುಂಪು ಗಂಭೀರ ಹಲ್ಲೆ ನಡೆಸಿತ್ತು. ನಂತರ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಲೈವ್ ಆಗಿ ಹಂಚಿಕೊಂಡಿದ್ದರು. ಅಯೂಬ್ ಮತ್ತು ಮೋಸಿಮ್ ಜೊತೆ ಚಾಲಕನಾಗಿದ್ದ ಬಹದ್ದೂರ್ ಎಂಬ ಯುವಕ ಹಿಂದೂವಾಗಿದ್ದು, ತಪ್ಪಿತಸ್ಥನಲ್ಲ ಎಂದು ಗೋರಕ್ಷಕ ದಳ ಮಥುರಾ ಜಿಲ್ಲಾ ಅಧ್ಯಕ್ಷ ಸೀತಾರಾಂ ಶರ್ಮಾ ಹೇಳಿದರು. ಆದರೆ ಬಹದ್ದೂರ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.