ಬಿಐಟಿ ಮತ್ತು ಬೀಡ್ಸ್ ವಿಶ್ವ ಹಸಿರು ಕಟ್ಟಡ ಸಪ್ತಾಹದ ಹಿನ್ನೆಲೆಯಲ್ಲಿ ‘ಗ್ರೀನ್ ವಾಕಥಾನ್’

Prasthutha|

ಸೆಪ್ಟೆಂಬರ್ 25 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ಬಿಐಟಿ ಕ್ಯಾಂಪಸ್ ವರೆಗೆ ಆಯೋಜಿಸಲಾಗಿದೆ ಎಂದು ಬಿಐಟಿ ಪ್ರಾಂಶುಪಾಲ ಡಾ.ಎಸ್ ಐ ಮಂಜೂರು ಬಾಷಾ ತಿಳಿಸಿದ್ದಾರೆ. ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಧ್ವಜಾರೋಹಣವನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಿಸಿ ಡಾ.ಪಿ.ಎಸ್.ಸುಬ್ರಹ್ಮಣ್ಯ ಯಡಪಡಿತ್ತಾಯ ನೇರವೇರಿಸಲಿದ್ದಾರೆ.

- Advertisement -

ಬೆಳಿಗ್ಗೆ 7ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ಪ್ರಾರಂಭಿಸಿ ವಾಲ್ಡಿಕರಿಯನ್ನು ಬಿಐಟಿ ಕ್ಯಾಂಪಸ್‌ನಲ್ಲಿ ಸೈಯದ್ ಮೊಹಮದ್ ಬ್ಯಾರಿ ಇವರಿಂದ ಸಸಿ (ಗಿಡ) ನೆಡುವುದರೊಂದಿಗೆ ನಡೆಯಲಿದೆ. ಈ ಕಾರ್ಯಕ್ರಮದ ಉದ್ದೇಶವು ಸುಸ್ಥಿರ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ ಮತ್ತು ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಮೂಲಕ ಜಾಗೃತಿ ಮೂಡಿಸುವುದಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಬಿಡ್ಸ್ ಪ್ರಿನ್ಸಿಪಾಲ್ ಆರ್. ಅಶೋಕ್ ಎಲ್ ಪಿ ಮಂಡೋನ್ಸಾ, ಬಿಐಟಿ-ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಡಾ. ಅಜೀಜ್ ಮುಸ್ತಫಾ, ಬಿಐಟಿ ಮಂಗಳೂರಿನ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.



Join Whatsapp