ದುಬೈ : ಐಪಿಎಲ್ ಪಂದ್ಯಾಟ ಇನ್ನೇನು ಆರಂಭಗೊಂಡಿದೆ ಎನ್ನುವಷ್ಟರಲ್ಲಿ ಕೋವಿಡ್ ಕರಿನೆರಳು ಮತ್ತೆ ಐಪಿಎಲ್ ಮೇಲೆ ಬಿದ್ದಿದೆ. ಸನ್ ರೈಸರ್ಸ್ ಹೈದರಾಬಾದ್ ನ ಆಟಗಾರ ಟಿ ನಟರಾಜನ್ ಕೋವಿಡ್ ದೃಡಪಟ್ಟಿದ್ದು ಅವರ ನಿಕಟ ಸಂಪರ್ಕದಲ್ಲಿದ್ದ ಆರು ಮಂದಿಯನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ.
ಇಂದು ಸಂಜೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧವಾಗಿ ಸನ್ ರೈಸರ್ಸ್ ಹೈದರಾಬಾದ್ ಹಣಾಹಣಿ ನಡೆಸಲಿದ್ದು, ಇದೀಗ ಎಲ್ಲಾ ಆಟಗಾರರ ಕೋವಿಡ್ ಪರೀಕ್ಷೆಯ ವರದಿಗಳ ಆಧಾರದ ಮೇಲೆ ಪಂದ್ಯಾಟದ ಭವಿಷ್ಯ ನಿರ್ಧಾರವಾಗಲಿದೆ.