ನವದೆಹಲಿ: ಕೇಂದ್ರ ವಿಸ್ಟಾದ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸುತ್ತ ಮುತ್ತಲು ಇರುವ ಎಲ್ಲಾ ವಕ್ಫ್ ಆಸ್ತಿಗಳ ಮೂಲ ಸ್ವರೂಪ, ಆಕಾರವನ್ನು ಸಂರಕ್ಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೆಹಲಿ ವಕ್ಫ್ ಬೋರ್ಡ್, ದೆಹಲಿ ಹೈಕೋರ್ಟ್ ನ ಮೊರೆಹೋಗಿದೆ.
ಪ್ರಸಕ್ತ ವಿಷಯದಲ್ಲಿ ಕೇಂದ್ರದ ಪರ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದವನ್ನು ಮಂಡಿಸಿದರು.
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂಜೀವ್ ಸಚ್ ದೇವ್ ಅವರನ್ನೊಳಗೊಂಡ ಏಕಸದಸ್ಯ ಪೀಠವು ಪ್ರಕರಣವನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿದರು.
ದೆಹಲಿ ವಕ್ಫ್ ಬೋರ್ಡ್ ಪರ ಹಿರಿಯ ವಕೀಲರಾದ ಸಂಜೋಯ್ ಘೋಸ್ ಅವರು ವಾದಿಸಿ ಮುಂದಿನ ಆದೇಶದ ವರೆಗೆ ವಕ್ಫ್ ಆಸ್ತಿಯ ಸಂರಕ್ಷಣೆಗೆ ಕೇಂದ್ರ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಿದರು.