ಹೈದರಾಬಾದ್: ತಮ್ಮ ವಿರುದ್ಧ ಡ್ರಗ್ಸ್ ಆರೋಪ ಮಾಡಿದ್ದ ರಾಜ್ಯ ಕಾಂಗ್ರೆಸ್ ಮುಖಂಡ, ಸಂಸದ ಎ. ರೇವಂತ್ ರೆಡ್ಡಿ ವಿರುದ್ಧ ತೆಲಂಗಾಣ ಕ್ಯಾಬಿನೆಟ್ ಸಚಿವ ಕೆ.ಟಿ ರಾಮರಾವ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಸಕ್ತ ಅಧಾರ ರಹಿತ ಸುದ್ದಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸದಂತೆ ಶಾಶ್ವತ ತಡೆಯಾಜ್ಞೆಯನ್ನು ವಿಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ರೇವಂತ್ ರೆಡ್ಡಿ ಅವರ ಆಧಾರ ರಹಿತ, ಕಳ್ಳತನ ಮತ್ತು ಸುಳ್ಳಾರೋಪದಿಂದಾಗಿ ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ತನಿಖೆ ಆರಂಭಿಸಿದೆ ಎಂದು ಕೆ.ಟಿ. ರಾಮರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡ್ರಗ್ ಪರೀಕ್ಷೆಗೆ ಒಳಗಾಗುವಂತೆ ಸಂಸದ ರೇವಂತ್ ರೆಡ್ಡಿ ಅವರು ಕೆ.ಟಿ.ರಾಮರಾಮ್ ಸವಾಲು ಹಾಕಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡ್ರಗ್ ಪರೀಕ್ಷೆಗೆ ಮುಂದಾಗುವುದಾದರೆ, ನಾನು ಪರೀಕ್ಷೆಗೆ ಸಿದ್ಧ ಎಂದು ಕೆಟಿಆರ್ ತಿರುಗೇಟು ನೀಡಿದ್ದರು.
ಕೆ.ಟಿ ರಾಮರಾಮ್ ತೆಲಂಗಾಣ ಸರ್ಕಾರದಲ್ಲಿ ಕೈಗಾರಿಕ, ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಮತ್ತು ನಗರಾಭಿವೃದ್ದಿ ಸಚಿವರಾಗಿದ್ದಾರೆ ಮತ್ತು ಟಿ.ಆರ್.ಎಸ್ ನ ಕಾರ್ಯಾಧ್ಯಕ್ಷರೂ ಆಗಿದ್ದಾರೆ.