ಫೆಲೆಸ್ತೀನ್ ಪ್ರತಿರೋಧದ ಹೊಸ ಗುರುತು ‘ಚಮಚ’

Prasthutha|

ರಮಲ್ಲಾ: ಬಾವುಟದೊಂದಿಗೆ ಚಮಚಗಳನ್ನು ಪ್ರದರ್ಶಿಸುವುದು ಫೆಲೆಸ್ತೀನ್ ಪ್ರತಿರೋಧದ ಹೊಸ ಹೆಗ್ಗುರುತು ಎನಿಸಿದೆ. ಇಸ್ರೇಲ್ ಸೆರೆಮನೆಯಿಂದ ತಪ್ಪಿಸಿಕೊಂಡ ಆರು ಜನ ಫೆಲೆಸ್ತೀನ್ ಸೆರೆಯಾಳುಗಳು ಚಮಚ, ಸೌಟುಗಳನ್ನು ಬಳಸಿ ಸುರಂಗ ತೋಡಿ ಪಾರಾಗಿದ್ದಾರೆ. ಆ ಸಾಹಸವು ಈಗ ಹೊಸ ಪ್ರತಿರೋಧದ ಸಂಕೇತವಾಗಿ ಹೊರಹೊಮ್ಮಿದೆ.


ಭಾರೀ ಕಾವಲಿನ ಗಿಲ್ಬೋವಾ ಜೈಲಿನಿಂದ 6 ಮಂದಿ ಫೆಲೆಸ್ತೀನ್ ಕೈದಿಗಳು ಸೆಪ್ಟೆಂಬರ್ 6ರಂದು ತಪ್ಪಿಸಿಕೊಂಡಿದ್ದರು. ಸಿಂಕ್ ನಿಂದ ಆರಂಭಿಸಿ ಹೊರಗೆ ಒಂದು ಹೊಂಡದವರೆಗೆ ಈ ಸುರಂಗ ತೋಡಿರುವುದು ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತದೆ. ತಪ್ಪಿಸಿಕೊಂಡ 6 ಜನರನ್ನು ಮರು ಬಂಧಿಸಲಾಗಿದೆ. ಮರು ಸಿಕ್ಕಿಬಿದ್ದ 6 ಜನರಲ್ಲಿ ಒಬ್ಬರಾದ ಮುಹಮ್ಮದ್ ಅಬ್ದುಲ್ಲಾ ಅಲ್ ಅರ್ದ್ಹಾ ಅವರ ವಕೀಲರ ಹೇಳಿಕೆಯಂತೆ, ಸುರಂಗ ತೋಡಲು ಅವರು ಚಮಚ ಮತ್ತು ಪ್ಲೇಟ್ ಗಳನ್ನು ಬಳಸಿದ್ದರು. ಅಲ್ಲದೆ ಕೆಟಲ್ ನ ಹಿಡಿಯನ್ನು ಕೂಡ ಗುಂಡಿ ತೋಡಲು ಬಳಸಲಾಯಿತು.

- Advertisement -


ವಕೀಲ ರಸ್ಲಾನ್ ಮಹಾಜನೇಹ್ ಹೇಳುತ್ತಾರೆ “ತುಂಬ ಜಾಗರೂಕತೆಯಿಂದ, ನಿರ್ಣಾಯಕವಾಗಿ, ಬುದ್ಧಿವಂತಿಕೆಯಿಂದ ಚಮಚವನ್ನು ಬಳಸಿ ಸುರಂಗ ತೋಡಿದ್ದಾರೆ. ಫೆಲೆಸ್ತೀನಿಯನ್ನರು ತಪ್ಪಿಸಿಕೊಂಡುದೇ ರಕ್ಷಣೆಯ ಸೋಲು!” ಎಂದು ಅರಬಿ 21 ವೆಬ್ ಸೈಟ್ ನಲ್ಲಿ ಸಾರಿ ಓರಬಿ ಬರೆದಿದ್ದಾರೆ.


ಇಸ್ರೇಲ್ ಹಿಡಿದುಕೊಂಡಿರುವ ಪಶ್ಚಿಮ ದಂಡೆಯ ಒಂದು ಪಟ್ಟಣ ತಲ್ಕರೇಮ್. ಈ ಸುರಂಗ ದಾಟು ಗಸ್ಸಾನ್ ಮಹ್ ದಾವಿ ನೆನಪುಗಳನ್ನು ಹೊರಗಿಡುತ್ತದೆ. 1996ರಲ್ಲಿ ಗಸ್ಸಾನ್ ಮತ್ತು ಇನ್ನೊಬ್ಬ ಸೆರೆಯಾಳು ಉಗುರುಗಳಿಂದಲೇ ಸುರಂಗ ಕೊರೆದು ಪಾರಾಗಿದ್ದರು. ಇಸ್ರೇಲಿ ಜೈಲಿನಿಂದ ಪಾರಾಗಲು ಉಗುರು ಬಳಸುವುದು, ಚಮಚ ಬಳಸುವುದು ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಲಿರುವ ವಿಷಯಗಳು ಎನ್ನುತ್ತಾರೆ ಗಸ್ಸಾನ್.

- Advertisement -