ರಷ್ಯಾದ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ; ಎಂಟು ಸಾವು

Prasthutha|

ಮಾಸ್ಕೋ: ರಷ್ಯಾದ ಪೆಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದು, ಒಬ್ಬ ವಿದ್ಯಾರ್ಥಿ ಈ ದಾಳಿ ನಡೆಸಿರುವುದಾಗಿ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

- Advertisement -

ಅಧಿಕಾರಿಗಳು ಆರಂಭದಲ್ಲಿ ಐದು ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು. ನಂತರ ಎಂಟು ಜನರು ಸಾವನ್ನಪ್ಪಿರುವುದು ಎಂದು ದೃಢಪಟ್ಟಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ದಾಳಿಕೋರನಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಕಟ್ಟಡದ ಕಿಟಕಿಯಿಂದ ಜಿಗಿಯುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ದಾಳಿಕೋರನು ಹೆಲ್ಮೆಟ್ ಧರಿಸಿ ಕಪ್ಪು ವಸ್ತ್ರದಲ್ಲಿ ಕ್ಯಾಂಪಸ್‌ಗೆ ಬರುತ್ತಿರುವುದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

- Advertisement -

ಕಳೆದ ಮೇ ತಿಂಗಳಲ್ಲಿ ಕಝಾನ್ ನಗರದಲ್ಲಿ 19 ವರ್ಷದ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದರು.

Join Whatsapp