ಚಂಡಮಾರುತ: 49 ವಿಮಾನಗಳ ಸ್ಥಗಿತಗೊಳಿಸಿದ ಜಪಾನ್

Prasthutha|

ಟೋಕಿಯೊ: ಜಪಾನ್ ನಲ್ಲಿ ಎದ್ದಿರುವ ಚಂಡಮಾರುತದಿಂದಾಗಿ 49 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜಪಾನ್ ನ ನೈರುತ್ಯ ಪ್ರದೇಶಗಳಾದ ಶಿಕೊಕು ಮತ್ತು ಕ್ಯುಶು ದ್ವೀಪಗಳಲ್ಲಿ ವಿಮಾನ ಹಾರಾಟವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ ಎಂದು ಎನ್ ಎಚ್ ಎಸ್ ನ್ಯೂಸ್ ವರದಿ ಮಾಡಿದೆ.

- Advertisement -

ಫುಕುವೊಕಾ ಮತ್ತು ಸಾಗಾದಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಹಲವಾರು ಜನರು ಗಾಯಗೊಂಡಿದ್ದಾರೆ. ಗಂಟೆಗೆ 67 ಮೈಲಿ ವೇಗದಲ್ಲಿ ಬೀಸುತ್ತಿರುವ ಚಂಡಮಾರುತವು ಜಪಾನ್ ನ ಪೆಸಿಫಿಕ್ ಕರಾವಳಿಯ ಮಧ್ಯಭಾಗದಿಂದ ಪೂರ್ವಕ್ಕೆ ಚಲಿಸುತ್ತಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಜಗತ್ತಿನ 10ನೆಯ ಅತಿ ಹೆಚ್ಚು ಜನಸಂಖ್ಯೆಯ ಮತ್ತು ವಿಶ್ವದ 2ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ಜಪಾನ್ ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ವಿಶ್ವದ ಪ್ರಮುಖ ದೇಶಗಳಲ್ಲೊಂದು. ಏಶ್ಯಾ ಖಂಡದ ಒಂದು ದ್ವೀಪ ದೇಶವಾದ ಜಪಾನ್ ಪೆಸಿಫಿಕ್ ಮಹಾಸಾಗರದ ಸುಮಾರು 3೦೦೦ ನಡುಗಡ್ಡೆಗಳ ಸಮೂಹ. ಟೋಕಿಯೋ ಮಹಾನಗರವು ಜಪಾನಿನ ರಾಜಧಾನಿಯಾಗಿದೆ.



Join Whatsapp