ಐವರ ಆತ್ಮಹತ್ಯೆಗೆ ಕಾರಣವಾದ ಬ್ಯಾಡರಹಳ್ಳಿ ಘಟನೆಗೆ ಕಾರಣವೇನು ಗೊತ್ತೇ?

Prasthutha|

ಬೆಂಗಳೂರು: ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆಗೆ ಪರಸ್ಪರರ ನಡುವಿನ ವೈಮನಸ್ಸು ಪ್ರಮುಖ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಪಶ್ಚಿಮ ವಿಭಾಗದ ಪೊಲೀಸರು ತೀವ್ರಗೊಳಿಸಿದ್ದು, ಕೃತ್ಯಕ್ಕೆ ಪ್ರಮುಖ ಕಾರಣ ಪರಸ್ಪರರ ನಡುವಿನ ವೈಮನಸ್ಸು ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಸಲಿ ಸತ್ಯ ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಡರಹಳ್ಳಿಯ ತಿಗಳರಪಾಳ್ಯದ ಮನೆಯೊಂದರಲ್ಲಿ ಸ್ಥಳೀಯ ಪತ್ರಿಕೆ ಸಂಪಾದಕರೊಬ್ಬರ ಕುಟುಂಬದ ಸದಸ್ಯರು ಕಳೆದ ಸೆ.15 ರಂದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಮೃತ ದೇಹಗಳ ಮರಣೋತ್ತರ ಪರೀಕ್ಷೆ ಬಳಿಕ ಹಲವು ವಿಚಾರ ಬಯಲಾಗಲಿದೆ. ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಒಂಬತ್ತು ತಿಂಗಳ ಮಗು ಹಸಿವಿನಿಂದ ಮೃತಪಟ್ಟಿದೆ ಎನ್ನುವುದು ಕಂಡುಬಂದಿದೆ. ಆದರೆ ಮನೆಯಲ್ಲಿದ್ದ ಎರಡೂವರೆ ವರ್ಷದ ಮಗು ಪ್ರೇಕ್ಷಾ ಬದುಕುಳಿದಿದೆ.

- Advertisement -

ಪತ್ರಿಕೆ ಸಂಪಾದಕರಾದ ಶಂಕರ್ ಮನೆಗೆ ಗುಲ್ಬರ್ಗ ಮೂಲದ ಹುಡುಗಿಯೊಬ್ಬಳು ಕೆಲಸ ಮಾಡಲು ಬರುತ್ತಿದ್ದಳು. ಆ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಎಂದು ಶಂಕರ್ ಪತ್ನಿ ಭಾರತಿ ಜಗಳವಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆಯಲ್ಲಿ ಶಂಕರ್ ದೂರು ದಾಖಲಿಸಿ ಹಣದ ವ್ಯವಹಾರಕ್ಕೆ ಸಂಬಂಧಿಸಿ ಪತ್ನಿ, ಮಗನ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾಗಿ ತಿಳಿಸಿದ್ದಾರೆ.

ಮನೆಯ ಕೆಳಭಾಗದಲ್ಲಿ ಮಗ 20 ಲಕ್ಷ ರೂ. ಕೊಟ್ಟು ಬಾರ್ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದು, ನೋಂದಣಿ ಮಾಡಿಸಲು ಶಂಕರ್ ಸಹಿ ಬೇಕಾಗಿತ್ತು. ಆದರೆ ಸಹಿ ಮಾಡಲು ಶಂಕರ್ ನಿರಾಕರಿಸಿದ್ದರು. ಈ ವಿಚಾರವಾಗಿಯೂ ಸೆ.12ರಂದು ಮನೆಯಲ್ಲಿ ಜಗಳವಾಗಿತ್ತು. ಈ ಎಲ್ಲ ವಿಚಾರಕ್ಕೆ ಜಗಳ ಮಾಡಿಕೊಂಡು ಶಂಕರ್ ಮನೆ ಬಿಟ್ಟು ಹೋಗಿದ್ದರು. ಸೆ.16ರಂದು ಶಂಕರ್ ಮನೆಯ ಬಳಿ ಬಂದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ವಾಪಸ್ ಹೋಗಿದ್ದಾರೆ. ಆದರೆ ನಿನ್ನೆ ಸಂಜೆ ಮತ್ತೆ ಮನೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

Join Whatsapp