ನವದೆಹಲಿ: ನ್ಯಾಷನಲ್ ಕಾನ್ಫರೆನ್ಸ್ ನಾಯಕ ತ್ರಿಲೋಚನ್ ಸಿಂಗ್ ವಾಜೀರ್ ಅವರ ಮೃತದೇಹ ಇಂದು ಬೆಳಿಗ್ಗೆ ದೆಹಲಿಯ ಫ್ಲಾಟ್ ವೊಂದರಲ್ಲಿ ಪತ್ತೆಯಾಗಿದೆ.
ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿರುವ ಫ್ಲಾಟ್ ನಲ್ಲಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಮಾಜಿ ಶಾಸಕರಾಗಿರುವ ತ್ರಿಲೋಚನ್ ಅವರು ಟ್ರಾನ್ಸ್ ಪೋರ್ಟ್ ಅನ್ನು ನಡೆಸುತ್ತಿದ್ದರು.
ಇವರ ಅಕಾಲಿಕ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಟ್ವೀಟ್ ಮೂಲಕ ಆಘಾತ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.