ಹೆಣ್ಣೇ ಪ್ರತಿರೋಧದಿ ನಡೆ ಅತ್ಯಾಚಾರವ ತಡೆ” ಎಂಬ ಘೋಷಣೆಯೊಂದಿಗೆ ಎನ್ ಡಬ್ಲ್ಯೂ ಎಫ್ ಧರಣಿ

Prasthutha|

ಬಂಟ್ವಾಳ: ದೆಹಲಿಯಲ್ಲಿ ನಡೆದ ಮಹಿಳಾ ಸಿವಿಲ್ ಡಿಫೆನ್ಸ್ ಅಧಿಕಾರಿಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ನ್ಯಾಷನಲ್ ವುಮೆನ್ಸ್ ಫ್ರಂಟ್ (ಎನ್ ಡಬ್ಲ್ಯೂ ಎಫ್) ವಿಟ್ಲ ಸಮಿತಿ ವತಿಯಿಂದ ಹೆಣ್ಣೇ”ಪ್ರತಿರೋಧದಿ ನಡೆ ಅತ್ಯಾಚಾರವ ತಡೆ ” ಎಂಬ ಘೋಷಣೆಯೊಂದಿಗೆ ಕಲ್ಲಡ್ಕದಲ್ಲಿ ಪ್ರತಿಭಟನೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಜಿಪ ಗ್ರಾಮ ಪಂಚಾಯತ್ ಉಪಾಧ್ಯೆಕ್ಷೆ ಸಬೀನಾ, ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದರೆ ಮಾತ್ರ ಮಹಿಳೆಗೆ ಸಮಾಜದಲ್ಲಿ ರಕ್ಷಣೆ ಸಿಗಬಹುದು. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತಿಕ್ರೂರ ಅತ್ಯಾಚಾರ ಮತ್ತು ಹತ್ಯೆ ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯ ಸುರಕ್ಷೆತೆಗೆ ಸ್ವಯಂ ರಕ್ಷಣೆಯ ಪ್ರತಿರೋಧದ ಕಲೆಯನ್ನು ಕಲಿಯಲೇ ಬೇಕಾಗಿದೆ ಎಂದು ಕರೆ ನೀಡಿದರು.

- Advertisement -


ಪ್ರತಿಭಟನಾ ಧರಣಿಯ ಅಧ್ಯಕ್ಷತೆಯನ್ನು ಗೋಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯೆ ಸುಮಯ್ಯಾ ಸಿದ್ದೀಕ್ ವಹಿಸಿದ್ದರು. ರಝಿಯಾ ಸಿರಾಜ್ ಕಾರ್ಯಕ್ರಮ ನಿರೂಪಿಸಿದರು

- Advertisement -