ಅನುಮಾನಾಸ್ಪದ ರೀತಿಯಲ್ಲಿ ಶಿಕ್ಷಕಿ ಮತ್ತು ಆಕೆಯ ಪುತ್ರನ ಭೀಕರ ಹತ್ಯೆ

Prasthutha|

ಕೊಲ್ಕತ್ತಾ: ಶಿಕ್ಷಕಿ ಹಾಗೂ ಆಕೆಯ 14 ವರ್ಷದ ಮಗ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

- Advertisement -

ಶಿಕ್ಷಕಿಯ ಕುಟುಂಬ ಕೊಲ್ಕತ್ತಾದ ಬೆಹಾಲಾ ಪರ್ನಶ್ರೀ ಏರಿಯಾದ ಬಹು ಅಂತಸ್ತಿನ ವಸತಿ ಕಟ್ಟಡದ ಫ್ಲ್ಯಾಟ್ ವೊಂದರಲ್ಲಿ ವಾಸವಾಗಿತ್ತು.
ಶಿಕ್ಷಕಿಯ ಗಂಡ ಎಂದಿನಂತೆ ತಮ್ಮ ಕೆಲಸ ಮುಗಿಸಿ ಮನೆಗೆ ಬರುವಾಗ ಮನೆಯ ಬಾಗಿಲು ತೆಗೆದು ಇರುವುದನ್ನು ಗಮನಿಸಿದ್ದಾರೆ. ಸುತ್ತ ನೋಡುವಷ್ಟರಲ್ಲಿ ಶಾಲಾ ಸಮವಸ್ತ್ರದಲ್ಲೇ ಕುತ್ತಿಗೆಗೆ ಟೈ ಸುತ್ತಿದ ರೀತಿಯಲ್ಲಿ ಮಗ ಬಿದ್ದಿರುವುದನ್ನು ನೋಡಿದ್ದಾರೆ. ಅಲ್ಲೆ ನೆಲದಲ್ಲಿ ತನ್ನ ಹೆಂಡತಿಯ ಮೃತ ದೇಹವನ್ನು ಸಹಕಂಡಿದ್ದಾರೆ.

ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಹಂತಕರು ಮನೆಗೆ ನುಸುಳಿ, ಬಾಗಿಲು ಮುಚ್ಚಿ, ದೀಪ ಆರಿಸಿ ಈ ಕೃತ್ಯವನ್ನು ಎಸಗಿರಬಹುದು ಎಂದು ಮೆಲ್ನೋಟಕ್ಕೆ ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೆ ಸತ್ಯ ಹೊರಬರಲಿದೆ.



Join Whatsapp