ತಾಲಿಬಾನ್ ಜೊತೆ ಮಾತುಕತೆ ನಡೆಸುವ ಸರ್ಕಾರಕ್ಕೆ ರೈತರ ಜೊತೆ ಮಾತುಕತೆ ನಡೆಸಲು ಸಮಯವಿಲ್ಲ: ಕಾಂಗ್ರೆಸ್ ವಾಗ್ದಾಳಿ

Prasthutha|

ನವದೆಹಲಿ: ಹರ್ಯಾಣದಲ್ಲಿ ಅಂತರ್ಜಾಲವನ್ನು ನಿರ್ಬಂಧಿಸುವ ಮೂಲಕ ರೈತರ ಧ್ವನಿಯನ್ನು ಅಡಗಿಸಲು ಪ್ರಯತ್ನ ನಡೆಸುತ್ತಿರುವುದು ಖೇದಕರ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

- Advertisement -

ನಿಮ್ಮ ಪಕ್ಷವು ತಾಲಿಬಾನ್ ಜೊತೆ ಮಾತುಕತೆ ನಡೆಸಿರುವಾಗ ರೈತರೊಂದಿಗೆ ಯಾಕೆ ಮಾತುಕತೆ ನಡೆಸಿಲ್ಲವೆಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಪ್ರಶ್ನಿಸಿದರು. ಮನೋಹರ್ ಕಟ್ಟರ್ ಸರ್ಕಾರದ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆಂದು ಅವರು ತಿಳಿಸಿದರು.

ಅಂತರ್ಜಾಲವನ್ನು ನಿರ್ಬಂಧಿಸುವುದು ಸರ್ವಾಧಿಕಾರದ ಪರಮಾವಧಿಯೆಂದು ಅವರು ಈ ಸಂದರ್ಭದಲ್ಲಿ ಸರ್ಕಾರವನ್ನು ಕುಟುಕಿದರು. ಮಹಾಪಂಚಾಯತ್ ಸ್ಥಳದಲ್ಲಿ ಪೊಲೀಸರು ಭಾರೀ ಪ್ರಮಾಣದ ಭದ್ರತೆಯನ್ನು ವ್ಯವಸ್ಥೆಗೊಳಿಸಿದ್ದಾರೆ. ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪೊಲೀಸರ ಜೊತೆ 30 ಬೆಟಾಲಿಯನ್ ಕೇಂದ್ರ ಮೀಸಲು ಪಡೆಯನ್ನು ಭದ್ರತೆಗಾಗಿ ನಿಯೋಜಿಸಿದೆ.

- Advertisement -

ರೈತರು ಕರ್ನಲ್ ಮಂಡಿ ತಲುಪದಂತೆ ತಡೆಯುವ ನಿಟ್ಟಿನಲ್ಲಿ ಬ್ಯಾರಿಕೇಡ್ ಮೂಲಕ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಯಾವುದೇ ಬೆಲೆ ತೆತ್ತಾದರೂ ನಾವು ಕರ್ನಲ್ ಮಂಡಿಯನ್ನು ಪ್ರವೇಶಿಸಿಯೇ ತೀರುತ್ತೇವೆ ಎಂದು ಆಕ್ರೋಶಿತ ರೈತರು ಗುಡುಗಿದ್ದಾರೆ.
ಅದೇ ರೀತಿ ಅಗತ್ಯವಿದ್ದರೆ ಬ್ಯಾರಿಕೇಡ್ ಮುರಿದು ಒಳ ನುಗ್ಗುವುದಾಗಿ ಅವರು ತಿಳಿಸಿದ್ದಾರೆ.

ಮಹಾಪಂಚಾಯತ್ ನಡೆಸುವುದನ್ನು ಯಾವುದೇ ಭದ್ರತಾ ವ್ಯವಸ್ಥೆಯು ನಮ್ಮನ್ನು ತಡೆಯಲು ಸಾಧ್ಯವಿಲ್ಲವೆಂದು ಕರ್ನಲ್ ಮೂಲಕ ಭಾರತೀಯ ಕಿಸಾನ್ ಯೂನಿಯನ್ ಮುಖಂಡಮುಖಂಡ ಜಗದೀಶ್ ಸಿಂಗ್ ಚಡೂನ್ ತಿಳಿಸಿದರು.

Join Whatsapp