ಮುಝಫ್ಫರ್ ನಗರ ಹಿಂಸಾಚಾರ | ಎಂಟು ವರ್ಷಗಳ ಬಳಿಕ ಏಳು ಜನರಿಗೆ ಶಿಕ್ಷೆ, 1,117 ಜನರ ಖುಲಾಸೆ

Prasthutha|

ಮುಝಫ್ಫರ್ ನಗರ: 2013ರಲ್ಲಿ ನಡೆದ ಮುಝಫ್ಫರ್ ನಗರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 1,117 ಜನರ ಮೇಲೆ ಕೊಲೆ, ದರೋಡೆ, ಅತ್ಯಾಚಾರ ಸೇರಿ ವಿವಿಧ 97 ಮೊಕದ್ದಮೆಗಳನ್ನು ಹೂಡಲಾಗಿತ್ತು. ಆದರೆ ಎಂಟು ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂಬ ಕಾರಣ ನೀಡಿ ಉಳಿದವರ ಬಿಡುಗಡೆ ಆಗಿದೆ.

- Advertisement -


ಮುಝಫ್ಫರ್ ನಗರ ಜಿಲ್ಲೆಯ ಕವಾಲ್ ಗ್ರಾಮದ ಸಚಿನ್ ಮತ್ತು ಗೌರವ್ ಎಂಬ ಇಬ್ಬರು ಯುವಕರ ಕೊಲೆಗೆ ಸಂಬಂಧಿಸಿದಂತೆ ಎಂಟು ಜನರಿಗೆ ಶಿಕ್ಷೆಯಾಗಿದೆ. ಪೊಲೀಸರ ಪ್ರಕಾರ 2013ರ ಆಗಸ್ಟ್ 27ರಂದು ಶಾನವಾಜ್ ಎಂಬ ಯುವಕನಿಗೆ ಆರು ಜನರು ಗುಂಪು ಇರಿದಿತ್ತು. ಇದಾದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದ ತನಿಖೆಗೆ ಒಂದು ವಿಶೇಷ ತನಿಖಾ ತಂಡವನ್ನು (ಎಸ್ ಐಟಿ ) ರಚಿಸಲಾಗಿತ್ತು.


ಸಿಟ್ ನವರು 1,480 ಜನರ ಮೇಲೆ 510 ಮೊಕದ್ದಮೆಗಳನ್ನು ದಾಖಲಿಸಿದ್ದರು. ಅದರಲ್ಲಿ 175 ಕೇಸುಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯಾಯಾಲಯ 97 ಕೇಸುಗಳನ್ನು ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ 1,117 ಜನರನ್ನು ಬಿಡುಗಡೆ ಮಾಡಿದೆ. ಡಬಲ್ ಮರ್ಡರ್ ಕೇಸಿನಲ್ಲಿ 7 ಜನರಿಗೆ ಮಾತ್ರ ಜೀವಾವಧಿ ಶಿಕ್ಷೆ ಆಗಿದೆ. ರಾಜ್ಯ ಸರಕಾರದ ಪ್ರಾಸಿಕ್ಯೂಶನ್ ಅನುಮತಿ ಪಡೆಯದ ಸಿಟ್ ತನಿಖಾ ತಂಡವು ಭಾರತೀಯ ದಂಡ ಸಂಹಿತೆಯ 153ಎ, 295ಎ ಅದರಡಿ 20 ಕೇಸುಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲೇ ಇಲ್ಲ.

- Advertisement -


ಇದರ ನಡುವೆ ಉತ್ತರ ಪ್ರದೇಶ ಸರಕಾರವು ಮುಝಫ್ಫರ್ ನಗರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 77 ಮೊಕದ್ದಮೆಗಳನ್ನು ಹಿಂಪಡೆಯಲು ತೀರ್ಮಾನಿಸಿತು. ಆದರೆ ಉತ್ತರ ಪ್ರದೇಶದ ಮಂತ್ರಿ ಸುರೇಶ್ ರಾಣಾ, ಎಂಎಲ್ ಎ ಸಂಗೀತ್ ಸೋಮ್, ಮಾಜಿ ಬಿಜೆಪಿ ಸಂಸದ ಎಂ. ಪಿ. ಭರತೇಂದು ಸಿಂಗ್, ವಿಶ್ವ ಹಿಂದೂ ಪರಿಷತ್ ನಾಯಕಿ ಸಾದ್ವಿ ಪ್ರಾಚಿ ಸೇರಿ ಬಿಜೆಪಿಯ 12 ನಾಯಕರಿಗೆ ಸಂಬಂಧಿಸಿದ ಒಂದು ಮೊಕದ್ದಮೆಯನ್ನಷ್ಟೆ ಹಿಂದಕ್ಕೆ ಪಡೆದಿದೆ. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 264 ಜನರು ಮೊಕದ್ದಮೆ ಎದುರಿಸುತ್ತಿದ್ದಾರೆ ಎಂದು ಸಿಟ್ ತಿಳಿಸಿದೆ.

Join Whatsapp