ನೀರು ತುಂಬಿದ್ದ ಕಲ್ಲು ಕೋರೆಯಲ್ಲಿ ಮುಳುಗಿ ಬಾಲಕ ಮೃತ್ಯು: ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಎಸ್ ಡಿಪಿಐ ಒತ್ತಾಯ

Prasthutha|

ಬಂಟ್ವಾಳ: ನೀರು ತುಂಬಿದ್ದ ಕಲ್ಲು ಕೋರೆಯಲ್ಲಿ ಮುಳುಗಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಪಾಯಕಾರಿ ಕೋರೆಗೆ ಯಾವುದೇ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ ಮಾಲೀಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಪುರಸಭಾ ಸಮಿತಿ ವತಿಯಿಂದ ಬಂಟ್ವಾಳ ತಾಲೂಕು ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

- Advertisement -


ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಪುರಸಬಾ ಸಮಿತಿಯ ಅಧ್ಯಕ್ಷ ಶರೀಫ್ ವಳವೂರು ನೇತೃತ್ವದ ನಿಯೋಗದಿಂದ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ಕಲ್ಲು ಕೋರೆಗೆ ತುಂಬಿದ ನೀರಿನಲ್ಲಿ ಆಯತಪ್ಪಿ ಬಿದ್ದು ಬಾಲಕ ಮೃತ ಪಟ್ಟಿದ್ದು, ಕಲ್ಲಿನ ಕೋರೆಯ ಗುಂಡಿಯನ್ನು ಮುಚ್ಚದೆ ಬಿಡಲಾಗಿದೆ. ಕೋರೆ ಗುಂಡಿಯ ಸುತ್ತ ಮುಳ್ಳಿನ ಬೇಲಿ ಹಾಗು ಅದಕ್ಕೆ ಕಟ್ಟಿರುವ ಹಗ್ಗ, ಸೂಚನಾ ಫಲಕ ಘಟನೆ ನಡೆದ ನಂತರ ತರಾತುರಿಯಲ್ಲಿ ಹಾಕಿರುವಂತೆ ಕಾಣುತ್ತಿದೆ. ಅಪಾಯಕಾರಿ ಕೋರೆಗೆ ಸಂಬಂಧಪಟ್ಟವರು ಯಾವುದೇ ಮುಂಜಾಗ್ರತೆ ಕ್ರಮ ವಹಿಸದಿರುವುದೇ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು,ಇದು ಅವಘಡಕ್ಕೆ ಕಾರಣವಾಗಿದೆ. ಇದರಿಂದ ಅಮಾಯಕ ಬಾಲಕ ಬಲಿಯಾಗುವಂತಾಗಿದೆ. ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಕಲ್ಲಿನ ಕೋರೆಯ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅದೇ ರೀತಿ ಮೃತ ಬಾಲಕನ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ನಿಯೋಗದಲ್ಲಿ ಎಸ್.ಡಿ.ಪಿ.ಐ ಬಂಟ್ವಳ ಅಧ್ಯಕ್ಷರಾದ ಶರೀಫ್ ವಳವೂರು, ಪುರಸಭಾ ಸದಸ್ಯರಾದ ಮುನೀಶ್ ಅಲಿ ಹಾಗು ಇದ್ರೀಸ್ ಪಿ.ಜೆ, ಎಸ್.ಡಿ.ಪಿ.ಐ ಬಂಟ್ವಳ ವಿಧಾನ ಸಭಾ ಅಧ್ಯಕ್ಷ ಯೂಸುಫ್ ಆಲಡ್ಕ , ಇಕ್ಬಾಲ್ ನಂದರಬೆಟ್ಟು ಹಾಗು ಉಬೈದುಲ್ಲಾ ಉಪಸ್ಥಿತರಿದ್ದರು.

Join Whatsapp