ಸರಕು ಸಾಗಣೆಯಲ್ಲಿ ದಾಖಲೆ ನಿರ್ಮಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Prasthutha|

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಗಸ್ಟ್ ನಲ್ಲಿ 37, 319 ಮೆಟ್ರಿಕ್ ಟನ್‌ ನಷ್ಟು ಸರಕು ಸಾಗಣೆ ಮಾಡುವ ಮೂಲಕ ಇದೇ ಮೊದಲ ಬಾರಿ ಅತಿಹೆಚ್ಚು ಸಾಗಾಣೆ ಮಾಡಿದ ದಾಖಲೆ ನಿರ್ಮಿಸಿದೆ.

- Advertisement -

ಬೆಂಗಳೂರು ವಿಮಾನ ನಿಲ್ದಾಣ ಪ್ರಾರಂಭದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ರಫ್ತು ಹಾಗೂ ಆಮದು ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲೂ ಸಾಗಣೆ ಪ್ರಮಾಣವನ್ನು ಹೆಚ್ಚಿಸಿರುವುದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಮ್ಮೆ ತಂದಿದೆ. ಜೊತೆಗೆ, 24,304 ಮೆಟ್ರಿಕ್ ಟನ್‌ನಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕು ಸಾಗಣೆ ಮಾಡಲಾಗಿದೆ. ಇದರಲ್ಲಿ 15, 224 ಮೆ.ಟ ರಫ್ತು ಪ್ರಮಾಣ ಇರುವುದು ಗಮರ್ನಾಹ ಎಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ 14 ವಿಶೇಷ ಸರಕು ಸಾಗಾಣೆದಾರರು ವಿಮಾನ ನಿಲ್ದಾಣದಿಂದ ರಫ್ತು ಮತ್ತು ಆಮದು ಮಾಡಲಾಗುತ್ತಿದ್ದು, ನಿತ್ಯ ಸುಮಾರು 33 ದೈನಂದಿನ ಸರಕು ಸಾಗಣೆ ವಿಮಾನಗಳನ್ನು ಕಾಣಲಾಗುತ್ತಿದೆ.

- Advertisement -

8.5 ಲಕ್ಷ ಮೆ.ಟ ಸರಕು ಸಾಗಣೆ ಗುರಿ: ಬೆಂಗಳೂರು ವಿಮನ ನಿಲ್ದಾಣದ ಸರಕು ಸಾಗಣೆ ಸಾಮರ್ಥ್ಯ ವಾರ್ಷಿಕ 7.15 ಲಕ್ಷ ಮೆಟ್ರಿಕ್ ಟನ್‌ನಷ್ಟು ಹೊಂದಿದ್ದು, ಈ ಪ್ರಮಾಣವನ್ನು 8.5 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣವೂ ಭಾರತದಲ್ಲೇ ಹೆಚ್ಚು ಚಟುವಟಿಕೆ ಹೊಂದಿರುವ ನಿಲ್ದಾಣಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಭಾರತೀಯ ಕಸ್ಟಮ್ಸ್ನ ಸಹಕಾರದೊಂದಿಗೆ ಕೃಷಿ ಮತ್ತು ಸಂಸ್ಕರಣೆಯ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಹಾಗೂ ಬೆಂಗಳೂರು ವಿಮಾನ ನಿಲ್ದಾಣ ಈ ಮೈಲುಗಲ್ಲು ಸಾಧಿಸಲು ಕೇಂದ್ರ ಸರಕಾರ ನೆರವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp