ಜನರು ಪ್ರತಿಭಟನೆ ಮಾಡುವಷ್ಟರ ಮಟ್ಟಿಗೆ ಗ್ಯಾಸ್ ಬೆಲೆ ಏರಿಕೆಯಾಗಿಲ್ಲ | ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ

Prasthutha|

ಬೆಂಗಳೂರು : ದೇಶದಲ್ಲಾಗಿರುವ ಎಲ್ಲಾ ವಸ್ತುಗಳ ಬೆಲೆ ಏರಿಕೆ ತಾತ್ಕಾಲಿಕ. ಕೊವಿಡ್‌ ಕಾರಣದ ಆರ್ಥಿಕ ಏರಿಳಿತದಿಂದ ಇಡೀ ಜಗತ್ತು ಸಮಸ್ಯೆ ಎದುರಿಸುತ್ತಿದೆ ಹಾಗಾಗಿ ಭಾರತದಲ್ಲೂ ಬೆಲೆ ಏರಿಕೆಯ ಸಮಸ್ಯೆಗಳಾಗಿವೆ. ಈ ಹಿಂದೆ ಕಾಂಗ್ರೆಸ್‌ನ ಭ್ರಷ್ಟಾಚಾರದಿಂದ ಬೆಲೆ ಏರಿಕೆ ಆಗಿತ್ತು. ಜನರು ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುವ ಮಟ್ಟಕ್ಕೆ ಬೆಲೆ ಏರಿಕೆ ಆಗಿಲ್ಲ ಎನ್ನುವ ಮೂಲಕ ಜನರ ಗಾಯದ ಮೇಲೆ ಬರೆ ಎಳೆಯುವಂತಹ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿವಾದಾತ್ಮಕವಾಗಿ ಹೇಳಿದ್ದಾರೆ.

- Advertisement -

ಈಗಾಗಲೇ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರದಿಂದ ತೈಲಬೆಲೆ,ಅಡುಗೆ ಅನಿಲ, ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿರುವ ಜನರಿಗೆ ಬೆಲೆ ಕಡಿತಗೊಳಿಸುವ ಮೂಲಕ ಜನಪರವಾಗಿ ನಿಲ್ಲಬೇಕಾಗಿದ್ದ ಆಡಳಿತ ಮತ್ತು ಜನಪ್ರತಿನಿಧಿಗಳು ಬೆಲೆ ಏರಿಕೆಯನ್ನು ಸಮರ್ಥಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಿ.ಟಿ ರವಿ ಟಾಂಗ್ ಕೊಟ್ಟಿದ್ದು. ನನ್ನ ಕಾಲದಲ್ಲಿ ಕೊತ್ವಾಲ್ ರಾಮಚಂದ್ರ ಬದುಕೇ ಇರಲಿಲ್ಲ. ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪ್ರೈಮರಿ ಸ್ಕೂಲ್ನಲ್ಲಿದ್ದೆ. ಆದರೆ ಹೆಮ್ಮೆಯಿಂದ ನಾನು ಅವರ ಶಿಷ್ಯ ಅಂತ ಹೇಳಿಕೊಂಡಿದ್ದು ನಾನಲ್ಲ. ರಾಜಕೀಯ ಮಾಡೋದಕ್ಕೆ ಗೂಂಡಾಗಿರಿ ಮೆರಿಟ್ ಅಂತಾ ನಾನು ಭಾವಿಸಿಲ್ಲ. ನಾನು ಚಳುವಳಿ ಮಾಡಿದ್ದೇನೆ, ಆ ಕಾರಣಕ್ಕೆ ಜೈಲಿಗೆ ಹೋಗಿದ್ದೇನೆ. ಭ್ರಷ್ಟಾಚಾರ, ಗೂಂಡಾಗಿರಿ ಮಾಡಿ ಜೈಲಿಗೆ ಹೋಗಿಲ್ಲ ಎಂದು ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.



Join Whatsapp