ಹಥ್ರಾಸ್ ಘಟನೆ | PFI ಗೆ 100 ಕೋಟಿ |ಮಾಧ್ಯಮಗಳ ಆರೋಪ ಸುಳ್ಳು | ಇಡಿ ಸ್ಪಷ್ಟನೆ

Prasthutha|

ಹೊಸದಿಲ್ಲಿ: ಹಥ್ರಾಸ್ ಪ್ರಕರಣಕ್ಕೆ ಸಂಬಂಧಿಸಿ ಅಶಾಂತಿ ಸೃಷ್ಟಿಸಲು PFI ಗೆ 100 ಕೋಟಿ ರೂಪಾಯಿ ಹರಿದುಬಂದಿದೆಯೆಂಬ ಪ್ರತಿಪಾದನೆಗೆಳು ಸುಳ್ಳು ಎಂಬುದಾಗಿಯೂ ಇಡಿ ಹೇಳಿದೆ. ಹಥ್ರಾಸ್ ನ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ದಾರಿ ತಪ್ಪಿಸಲು ಭೀಮ ಆರ್ಮಿ ಮತ್ತು ಇತರ ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂದು ಉತ್ತರ ಪ್ರದೇಶದ ಮಾಜಿ ಡಿ.ಜಿ.ಪಿ ಬ್ರಿಜ್ ಲಾಲ್ ಹೇಳಿಕೆಯ ಬಳಿಕ ಈ ಸ್ಪಷ್ಟನೆ ಹೊರಬಿದ್ದಿದೆ.

- Advertisement -

ಹಥ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರ ಶೇಖರ್ ಆಝಾದ ನೇತೃತ್ವದ ಭೀಮ ಆರ್ಮಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಧ್ಯೆ ಯಾವುದೆ ಸಂಪರ್ಕವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಸ್ಪಷ್ಟಪಡಿಸಿದೆ. ಇದರೊಂದಿಗೆ ಸಂಘಟನೆಯ ವಿರುದ್ಧದ ಸುಳ್ಳು ಅಭಿಯಾನ ಕೈಗೊಂಡ ಮಾಧ್ಯಮಗಳಿಗೆ ಮುಖಭಂಗವಾಗಿದೆ.  

ತನ್ಮಧ್ಯೆ, ಹಥ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ತೆರಳಿದ್ದ ಪತ್ರಕರ್ತ ಮತ್ತು ಕ್ಯಾಂಪಸ್ ಫ್ರಂಟ್ ಸದಸ್ಯರನ್ನು ಬಂಧಿಸಿ ದೇಶದ್ರೋಹ ಪ್ರಕರಣವನ್ನು ಹೇರಲಾಗಿತ್ತು. ಹಥ್ರಾಸ್ ಘಟನೆಯಿಂದ ದೇಶದ ಜನರ ಗಮನವನ್ನು ತಪ್ಪಿಸುವುದಕ್ಕಾಗಿ ಈ ಬಂಧನಗಳನ್ನು ನಡೆಸಲಾಗಿದೆಯೆಂದು ಸಂಘಟನೆ ಹೇಳಿತ್ತು.  

- Advertisement -

ಉತ್ತರ ಪ್ರದೇಶದ ಮಾಜಿ ಡಿ.ಜಿ.ಪಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಮಾಜಿ ಮುಖ್ಯಸ್ಥ ಬ್ರಿಜ್ ಲಾಲ್, “ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಲೈಂಗಿಕ ಸಂತ್ರಸ್ತೆ ಮತ್ತು ಆಕೆಯ ಕುಟುಂಬವು ಮೊದಲು ಓರ್ವ ವ್ಯಕ್ತಿಯನ್ನು ಆರೋಪಿಸಿತ್ತು. ನಂತರ 8 ದಿನಗಳ ಬಳಿಕ ಮೂವರು ಭಾಗಿಯಾಗಿದ್ದಾರೆಂದು  ಆರೋಪಿಸಿದ್ದರು” ಎಂದು ಹೇಳಿದ್ದರು.

ಹಥ್ರಾಸ್ ಪ್ರತಿಭಟನೆಗಳ ವೇಳೆ ಪಾಪ್ಯುಲರ್ ಫ್ರಂಟ್ ಮತ್ತು ಕ್ಯಾಂಪಸ್ ಫ್ರಂಟ್ ಸಂಘಟನೆಗಳು ಕ್ರಿಯಾಶೀಲಗೊಂಡಿದ್ದು, 100 ಕೋಟಿ ರೂಪಾಯಿ ಹಣ ಹರಿದು ಬಂದಿದ್ದವು  ಎಂದು ಬ್ರಿಜ್ ಲಾಲ್ ಆರೋಪಿಸಿದ್ದರು.



Join Whatsapp