ಭೀಮಾ ಕೋರೆಗಾಂವ್ ಹಿಂಸಾಚಾರ: 83ರ ಹರೆಯದ ಹೋರಾಟಗಾರನನ್ನು ಬಂಧಿಸಿದ ಎನ್.ಐ.ಎ

Prasthutha|

➤ ಆದಿವಾಸಿ ಹಕ್ಕುಗಳ ಪರ ಹೋರಾಟಗಾರ ಫಾದರ್ ಸ್ಟ್ಯಾನಿ ಸ್ವಾಮಿ ಬಂಧನ

- Advertisement -

➤ ಇತಿಹಾಸಕಾರ ರಾಮಚಂದ್ರ ಗುಹಾ, ವಕೀಲ ಪ್ರಶಾಂತ್ ಭೂಷಣ್ ಟೀಕೆ

ಹೊಸದಿಲ್ಲಿ: 2018ರಲ್ಲಿ ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ನಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್.ಐ.ಎ) 83ರ ಹರೆಯದ ಕ್ರಿಶ್ಚಿಯನ್ ಪಾದ್ರಿಯೊಬ್ಬರನ್ನು ಬಂಧಿಸಿದ್ದಾರೆ.

- Advertisement -

ಆದಿವಾಸಿಗಳ ಏಳಿಗಾಗಿ ಕೆಲಸ ಮಾಡುತ್ತಿದ್ದ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿಯವರನ್ನು ದಿಲ್ಲಿಯ ಎನ್.ಐ.ಎ ಅಧಿಕಾರಿಗಳ ತಂಡ ಜಾರ್ಖಂಡ್ ರಾಜಧಾನಿ ರಾಂಚಿಯಿಂದ ಬಂಧಿಸಿದ ಕೊಂಡೊಯ್ದಿದ್ದಾರೆ. ಅವರನ್ನು ಬಂಧಿಸಿ ಕರೆದೊಯ್ಯುವ ಮೊದಲು ಅಧಿಕಾರಿಗಳು ಸುಮಾರು 20 ನಿಮಿಷಗಳ ಕಾಲ ಅವರ ಮನೆಯಲ್ಲಿ ತಂಗಿದ್ದರು ಎನ್ನಲಾಗಿದೆ.

ಬಂಧನವು ಆಕ್ರೋಶಕ್ಕೆ ಕಾರಣವಾಗಿದೆ. ಸ್ಟ್ಯಾನ್ ಸ್ವಾಮಿ ಆದಿವಾಸಿಗಳ ಹಕ್ಕಿಗಾಗಿ ಹೋರಾಡುತ್ತಾ ತನ್ನ ಜೀವನವನ್ನು ಸವೆಸಿದ್ದರು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.

“ಅದಕ್ಕಾಗಿ ಮೋದಿ ಸರಕಾರ ಅವರನ್ನು ದಮನಿಸಲು ಮತ್ತು ಮೌನಗೊಳಿಸಲು ಯತ್ನಿಸುತ್ತಿದೆ. ಆದಿವಾಸಿಗಳ ಜೀವ ಮತ್ತು ಜೀವನಕ್ಕಿಂತ ಗಣಿ ಕಂಪೆನಿಗಳ ಲಾಭ ಈ ಆಡಳಿತಕ್ಕೆ ಮುಖ್ಯವಾಗಿದೆ” ಎಂದು ಗುಹಾ ಟ್ವೀಟ್ ಮಾಡಿದ್ದಾರೆ.

ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, “…ಈಗ ಎನ್.ಐ.ಎ ಯಿಂದ ಯು.ಎ.ಪಿ.ಎ ಅಡಿ ಬಂಧಿಸಲ್ಪಟ್ಟಿದ್ದಾರೆ. ಬಿಜೆಪಿ ಸರಕಾರ ಮತ್ತು ಎನ್.ಐ.ಎ ಭ್ರಷ್ಟಾಚಾರಕ್ಕೆ ಮಿತಿಯೇ ಇಲ್ಲ” ಎಂದಿದ್ದಾರೆ.

Join Whatsapp