ವಿಶೇಷ ನ್ಯಾಯಾಯಲದ ವಿಚಾರಣೆಯಲ್ಲಿರುವ ಹತ್ರಾಸ್ ಪ್ರಕರಣದ ವರ್ಗಾವಣೆ ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್

Prasthutha|

ಮಥುರಾ: ಹತ್ರಾಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ವಿಶೇಷ ನ್ಯಾಯಾಲಯ ನಡೆಸುತ್ತಿರುವ ಪ್ರಕರಣದ ವಿಚಾರಣೆಯನ್ನು ತಡೆಹಿಡಿಯಲು ಅಥವಾ ವರ್ಗಾಯಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.

- Advertisement -

ವಿಚಾರಣೆಯ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡವೊಂದು ನ್ಯಾಯಾಲಯಕ್ಕೆ ಅಕ್ರಮ ಪ್ರವೇಶಮಾಡಿ ವಿಚಾರಣೆ ಮುಂದುವರಿಸದಂತೆ ನ್ಯಾಯಾಧೀಶರ ಮೇಲೆ ಒತ್ತಡ ಹೇರಿದೆ. ಅಲ್ಲದೆ ಸಾಕ್ಷಿ, ದೂರುದಾರ ಮತ್ತು ವಕೀಲರನ್ನು ಬೆದರಿಸಿತ್ತು. ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಸಹೋದರ ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿ ಈ ಅದೇಶ ನೀಡಲಾಗಿದೆ.

ಈ ಕುರಿತು ಜಿಲ್ಲಾ ನ್ಯಾಯಾಧೀಶರು ಮತ್ತು ಭದ್ರತಾ ಅಧಿಕಾರಿಗಳ ವರದಿಯನ್ನು ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಜಸ್ಪ್ರೀತ್ ಸಿಂಗ್ ರವರನ್ನೊಳಗೊಂಡ ಪೀಠ ನ್ಯಾಯಾಲಯದಲ್ಲಿರುವ ವಿಚಾರಣೆಯನ್ನು ತಡೆಹಿಡಿಯಲು ನಿರಾಕರಿಸಿ ಆದೇಶ ನೀಡಿದೆ.

- Advertisement -

ಹತ್ರಾಸ್ ಘಟನೆಯ ಸಂತ್ರಸ್ತೆಯ ಮೃತದೇಹವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರ ನಡೆಸದೆ ಅಂತ್ಯ ಸಂಸ್ಕಾರ ನಡೆಸಿದ ಕುರಿತಂತೆ ಡಿಸೆಂಬರ್ 2020 ರಲ್ಲಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ.

ಪ್ರಕರಣವನ್ನು ಗೌಪ್ಯ ರೀತಿಯಲ್ಲಿ ವಿಚಾರಣೆ ನಡೆಸಿ ವರದಿ ಒಪ್ಪಿಸುವಂತೆ ಜಿಲ್ಲಾ ನ್ಯಾಯಾಧೀಶರು ಐಜಿ ಮತ್ತು ಸಿ.ಆರ್.ಪಿ.ಎಫ್ ಕೇಂದ್ರ ವಲಯಕ್ಕೆ ಸೂಚಿಸಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯು ಮುಚ್ಚಿದ ಕವರ್ ನಲ್ಲಿ ವರದಿಯನ್ನು ಗೌಪ್ಯವಾಗಿ ಸಲ್ಲಿಸಿದೆ. ಈ ಅರ್ಜಿಯ ಮುಂದಿನ ವಿಚಾರಣೆಯು ಸೆಪ್ಟೆಂಬರ್ 16 ರಂದು ನಡೆಯಲಿದೆಯೆಂದು ನ್ಯಾಯಾಧೀಶರು ತಿಳಿಸಿದ್ದಾರೆ.



Join Whatsapp