ಆದಿತ್ಯನಾಥ್ ವಿರುದ್ದ ಚುನಾವಣೆ ಸ್ಪರ್ಧಿಸುವುದಾಗಿ ಘೋಷಿಸಿದ್ದ ಮಾಜಿ IPS ಅಧಿಕಾರಿಯ ಬಂಧನ!

Prasthutha|

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ಮಾಜಿ ಐಪಿಎಸ್‌ ಅಧಿಕಾರಿಯನ್ನು ಬಂಧಿಸಲಾಗಿದೆ.ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಡಿ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

- Advertisement -

2028ಕ್ಕೆ ನಿವೃತ್ತರಾಗಬೇಕಿದ್ದ ಐಪಿಎಸ್‌ ಅಧಿಕಾರಿ ಅಮಿತಾಬ್‌ ಠಾಕೂರ್‌ ಅವರು ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಇದೇ ವರ್ಷದ ಮಾರ್ಚ್‌ನಲ್ಲಿ ನಿವೃತ್ತರಾಗಿದ್ದರು. ಲಖನೌದಲ್ಲಿರುವ ನಿವಾಸದಿಂದ ಅಮಿತಾಬ್‌ ಠಾಕೂರ್‌ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಲವಂತವಾಗಿ ಕರೆದೊಯ್ದ ದೃಶ್ಯವು ವಿಡಿಯೊದಲ್ಲಿದೆ.

ನೀವು ನನಗೆ ಎಫ್‌ಐಆರ್ ಪತ್ರವನ್ನು ತೋರಿಸದ ಹೊರತು ನಾನು ನಿಮ್ಮೊಂದಿಗೆ ಬರುವುದಿಲ್ಲ ಎಂದು ಐಪಿಎಸ್‌ ಅಧಿಕಾರಿ ಉತ್ತರ ಪ್ರದೇಶ ಪೊಲೀಸರಿಗೆ ಹೇಳುತ್ತಾರೆ. ಆದರೂ, ಪೊಲೀಸರು ಅವರನ್ನು ಬಲವಂತವಾಗಿ ಜೀಪ್‌ನಲ್ಲಿ ತಳ್ಳುತ್ತಾರೆ. ಈ ದೃಶ್ಯಗಳನ್ನು ಹೊಂದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

Join Whatsapp