ನಗ್ನ ವಿಡಿಯೋ ಇದೆಯೆಂದು ಬ್ಲ್ಯಾಕ್ ಮೇಲ್: ಬಿಜೆಪಿ ಮುಖಂಡನಿಂದ ದೂರು

Prasthutha|

ಬೆಂಗಳೂರು: ಮಹಿಳೆಯೊಬ್ಬಳಿಂದ ತಾವು ಮೋಸ ಹೋಗಿರುವುದಾಗಿ ಬಿಜೆಪಿ ರಾಷ್ಟ್ರೀಯ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಹಾಗೂ ಡಾ. ಅಂಬೇಡ್ಕರ್ ಫೌಂಡೇಷನ್ ನಿರ್ದೇಶಕ ಚಿ.ನಾ. ರಾಮು ದೂರು ದಾಖಲು ಮಾಡಿದ್ದಾರೆ.

- Advertisement -

ಅಪರಿಚಿತ ವ್ಯಕ್ತಿಯೊಬ್ಬ ತಮಗೆ ಫೋನ್ ಮೂಲಕ ಕರೆ ಮಾಡಿ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಈ ಬೆದರಿಕೆಗೆ ಹೆದರಿ ಈಗಾಗಲೇ 31,500 ರೂ . ಹಣವನ್ನು ಅಪರಿಚಿತನ ಖಾತೆಗೆ ಜಮೆ ಮಾಡಲಾಗಿದೆ. ತಮಗೆ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಫೇಸ್‌ ಬುಕ್ ಮೆಸೆಂಜರ್‌ ಮೂಲಕ ಒಬ್ಬಾಕೆ ಪರಿಚಯವಾಗಿದ್ದಳು. ಅವಳು ನನ್ನ ಮೊಬೈಲ್ ನಂಬರ್ ಪಡೆದುಕೊಂಡಿದ್ದಳು. ನಂತರ ವಿಡಿಯೋ ಕಾಲ್ ಮಾಡಿ ತೀರಾ ಅಸಭ್ಯವಾಗಿ ವರ್ತಿಸಿದ್ದಾಳೆ. ನಾನು ಕರೆ ಕಟ್ ಮಾಡಿದ್ದೆ, ಇಷ್ಟಾದ ಮೇಲೆ ಈಗ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಾನೆ. ಯುವತಿಯೊಂದಿಗೆ ನಗ್ನವಾಗಿರುವ ನಿನ್ನ ವಿಡಿಯೋ ನನ್ನ ಬಳಿ ಇದೆ. ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ರಾಮು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ ಐಆರ್ ದಾಖಲಾಗಿದೆ.



Join Whatsapp