ಬಂಟ್ವಾಳ: ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Prasthutha|

ಬಂಟ್ವಾಳ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯತ್ವ ಅಭಿಯಾನವು ರಾಜ್ಯಾದ್ಯಂತ ” ಒಗ್ಗಟ್ಟಿನಲ್ಲಿ ಬಲವರ್ಧನೆ , ಭಿನ್ನ ಧ್ವನಿಯ ರಕ್ಷಣೆ” ಎಂಬ ಘೋಷಾ ವಾಕ್ಯದಡಿ ಪ್ರಾರಂಭವಾಗಿದ್ದು, ಇದರ ಭಾಗವಾಗಿ ಬಂಟ್ವಾಳ ಜಿಲ್ಲಾ ಸದಸ್ಯತ್ವ ಅಭಿಯಾನಕ್ಕೆ ಬಂಟ್ವಾಳದಲ್ಲಿ ಚಾಲನೆ ನೀಡಲಾಯಿತು.
ಬಂಟ್ವಾಳ ಜಿಲ್ಲಾ ಅಧ್ಯಕ್ಷರಾದ ಅಶ್ಫಾಕ್ ತಲಪಾಡಿ ಸದಸ್ಯತ್ವ ಕೂಪನ್ ವಿದ್ಯಾರ್ಥಿಗಳಿಗೆ ನೀಡುವ ಮುಖಾಂತರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ಜಿಲ್ಲಾ ಕಾರ್ಯದರ್ಶಿ ಐಮಾನ್ ಬಂಟ್ವಾಳ್, ಜಿಲ್ಲಾ ಉಪಾಧ್ಯಕ್ಷ ರಾದ ಹಂದಾನ್, ಜಿಲ್ಲಾ ಸದಸ್ಯರಾದ ಹಫಾಝ್, ರಿಫಾಝ್ , ಕಲಂದರ್ ಫರಂಗಿಪೇಟೆ ಹಾಗೂ ಬಿ.ಸಿ ರೋಡ್ ಏರಿಯಾ ಅಧ್ಯಕ್ಷರಾದ ಫಾರೂಕ್ ಹಾಗೂ ಕಾರ್ಯದರ್ಶಿ ನಿಹಾಬ್ ಮತ್ತಿತರರು ಉಪಸ್ಥಿತರಿದ್ದರು.



Join Whatsapp