UAPA ನಿಂದ ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆ; ಕರಾಳ ಕಾನೂನಿನ ಬದಲಾವಣೆಗೆ ಪ್ರಗತಿಪರರ ಆಗ್ರಹ

Prasthutha|

ನವದೆಹಲಿ: ಭಾರತೀಯರ ನಾಗರಿಕರ ಸ್ವಾತಂತ್ರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ಯನ್ನು ಬದಲಾವಣೆಗೊಳಿಸಬೇಕೆಂದು ಸಮಾನ ಮನಸ್ಕ ಪ್ರಗತಿಪರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

- Advertisement -

110 ಕ್ಕೂ ಅಧಿಕ ಪ್ರಮುಖ ನಿವೃತ್ತ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಸೋಮವಾರ ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ಯು ಪ್ರಸಕ್ತ ಭಾರತದಲ್ಲಿ ಸಂಪೂರ್ಣವಾಗಿ ದುರುಪಯೋಗವಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಪ್ರಸಕ್ತ ಚಾಲ್ತಿಯಲ್ಲಿರುವ ಯುಎಪಿಎ ಕಾಯ್ದೆ ನಾಗರೀಕರ ಸ್ವಾತಂತ್ರ್ಯಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯೆಂದು ಬಣ್ಣಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರನ್ನು ಸಂಪರ್ಕಿಸಿ ಮತ್ತು ಸಂಸತ್ತಿನ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ ಯುಎಪಿಎ ಬದಲಿಸಲು ಹೊಸ ಕಾನೂನನ್ನು ಜಾರಿಗೊಳಿಸಲು ಅವರು ಒತ್ತಾಯಿಸಿದರು. ಕೇಂದ್ರ ಸರ್ಕಾರಕ್ಕೆ ಬರೆದ ಬಹಿರಂಗ ಪತ್ರದಲ್ಲಿ ಯುಎಪಿಎ ಕಾನೂನು ಭಾರತೀಯರ ಮೂಲಭೂತ ಹಕ್ಕುಗಳ ಸಾಂವಿಧಾನಿಕ ಭರವಸೆಗಳನ್ನು ಉಲ್ಲಂಘಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ಯುಎಪಿಎ ಕಾನೂನು ಐದು ದಶಕಗಳಿಂದಲೂ ಅಸ್ತಿತ್ವದಲ್ಲಿದ್ದರೂ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದ ಕಠಿಣ ತಿದ್ದುಪಡಿಗಳು ದಮನಕಾರಿ ಮತ್ತು ಆಳ್ವವ ವರ್ಗದ ಮತ್ತು ಪೊಲೀಸರ ದುರುಪಯೋಗದ ಅಸ್ತ್ರವಾಗಿ ಪರಿಣಮಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ದೇವಾಂಗನಾ ಕಲಿಟಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಸೇರಿದಂತೆ ಹಲವಾರು ಹೋರಾಟಗಾರರನ್ನು ಯುಎಪಿಎ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿತ್ತು. ಮಾತ್ರವಲ್ಲದೆ ದೇಶದಲ್ಲಿ ಯುಎಪಿಎ ಕಾಯ್ದೆಯಡಿಯಲ್ಲಿ ಸಾಕಷ್ಟು ಮಂದಿಯ ಬಂಧನವಾಗುತ್ತಲೇ ಇದೆ.

ಕೇಂದ್ರ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದವರಲ್ಲಿ ಪ್ರಮುಖವಾಗಿ ಅನಿತಾ ಅಗ್ನಿಹೋತ್ರಿ ಐಎಎಸ್ (ನಿವೃತ್ತ), ಸಲಾವುದ್ದೀನ್ ಅಹ್ಮದ್ ಐಎಎಸ್ (ನಿವೃತ್ತ), ಎಸ್ಪಿ ಆಂಬ್ರೋಸ್ ಐಎಎಸ್ (ನಿವೃತ್ತ), ಆನಂದ ಅರ್ನಿ ಐಎಎಸ್ (ನಿವೃತ್ತ), ಜಿ.ಬಾಲಚಂದ್ರನ್, ವಪ್ಪಲ ಬಾಲಚಂದ್ರನ್, ಗೋಪಾಲನ್ ಬಾಲಗೋಪಾಲ್, ಚಂದ್ರಶೇಖರ್ ಬಾಲಕೃಷ್ಣನ್, ರಾಣಾ ಬ್ಯಾನರ್ಜಿ ಆರ್.ಎ.ಎಸ್ (ನಿವೃತ್ತ), ಟಿಕೆ ಬ್ಯಾನರ್ಜಿ, ಶರದ್ ಬೆಹಾರ್, ಅರಬಿಂದೋ ಬೆಹೆರಾ, ಕೆ.ವಿ. ಭಗೀರಥ IFS (ನಿವೃತ್ತ), ರವಿ ಬೂದಿರಾಜ IAS (ನಿವೃತ್ತ) ಸುಂದರ್ ಬುರ್ರಾ IAS (ನಿವೃತ್ತ) ಮತ್ತು ಇತರರು ಒಳಗೊಂಡಿದ್ದಾರೆ



Join Whatsapp