ಮಂಗಳೂರು: ಫೀಡರ್ ಕಾಮಗಾರಿ ಹಿನ್ನೆಲೆ ನಾಳೆ ನಗರದ ವಿವಿಧೆಡೆ ಪವರ್ ಕಟ್

Prasthutha|

ಮಂಗಳೂರು: ಆಗಸ್ಟ್ 18ರಂದು ನಗರದ ವಿವಿಧೆಡೆ ಫೀಡರ್ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಹಿನ್ನೆಲೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

- Advertisement -

33/11 ಕೆವಿ ಪಣಂಬೂರು ಉಪಕೇಂದ್ರದಿಂದ ಹೊರಡುವ 11 ಕೆವಿ ಕೋಡಿಕಲ್ ಫೀಡರ್‍ ಜಂಪರ್ ಬದಲಾವಣೆ ಮತ್ತು ಜಿ.ಓ.ಎಸ್. ದುರಸ್ತಿ ಕಾಮಗಾರಿ ಹಿನ್ನೆಲೆ ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೋಡಿಕಲ್, ವಿವೇಕಾನಂದ ನಗರ, ಕರಾವಳಿ ಕಾಲೇಜು, ಬಂಗ್ರ ಕುಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.

ಇನ್ನು ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆವಿ ಸೌತ್ ವಾರ್ಫ್ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿ ಹಿನ್ನೆಲೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹ್ಯಾಮಿಲ್ಟನ್ ಸರ್ಕಲ್, ಡಿ.ಸಿ.ಆಫೀಸ್, ಸೈಂಟ್ ಆನ್ಸ್, ನೀರೇಶ್ವಾಲ್ಯ ರೋಡ್, ಗೂಡ್ ರಸ್ತೆ, ಸಂಜೆವಾಣಿ, ಬದ್ರಿಯಾ ರೋಡ್, ಧಕ್ಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

- Advertisement -

ಅದಲ್ಲದೇ, ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆವಿ ಶಕ್ತಿನಗರ ಹಾಗೂ 11 ಕೆವಿ ಕುಡುಪು ಫೀಡರ್‍ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿ ಹಿನ್ನೆಲೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಕ್ತಿನಗರ, ಕೊಂಗೂರು, ರಾಜೀವ ನಗರ, ಸಂಜಯನಗರ, ಪ್ರೀತಿನಗರ, ಕ್ಯಾಸ್ತಲಿನೋ ಕಾಲೋನಿ, ಕಕ್ಕೆಬೆಟ್ಟು, ಕಲ್ಪನೆ, ಕೆ.ವಿ.ಎಸ್, ಕುಲಶೇಖರ ಡೈರಿ, ಸರಿಪಲ್ಲ, ಕನ್ನಗುಡ್ಡೆ, ಕುಲಶೇಖರ ಚೌಕಿ, ಕುಡುಪು ಟೆಂಪಲ್, ಪಿಲಿಕುಮೇರಿ, ಕುಲಶೇಖರ, ಉಮಿಕಾನ, ಎಸ್.ಹೆಚ್.ನಗರ, ದಯಾಂಬು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ತಿಳಿಸಿದೆ.

Join Whatsapp