ಕಾಂಗ್ರೆಸ್ ಕಚೇರಿಗೆ ಬಾರ್ ಎಂದು ಹೆಸರಿಡಲಿ| ನಾಲಿಗೆ ಹರಿಯ ಬಿಟ್ಟ ಬಿಜೆಪಿ ಸಂಸದ

Prasthutha|

ಬೆಂಗಳೂರು : ಸದಾ ವಿವಾದಾತ್ಮಕ ಹೇಳಿಕೆಗೆ ಕುಖ್ಯಾತರಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇತ್ತೀಚ್ಚೆಗಷ್ಟೆ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕಾಂಗ್ರೆಸ್ ಕಚೇರಿಗೆ ಬೇಕಾದರೆ ಮದ್ಯದಂಗಡಿ(ಬಾರ್) ಎಂದು ನಾಮಕರಣ ಮಾಡಲಿ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

- Advertisement -

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಸಂಜೆ ಆಗುತ್ತಿದ್ದಂತೆ ಯಾವುದರ ಚಿಂತೆ ಶುರುವಾಗುತ್ತದೆಯೋ ಅದರ ಬಗ್ಗೆ ಕಾಂಗ್ರೆಸ್ನ ವರು ಮಾತನಾಡುತ್ತಾರೆ. ಹಾಗಾಗಿ, ಅವರು ತಮ್ಮ ಪಕ್ಷದ ಕಚೇರಿಗೆ ಆ ಹೆಸರಿಡಲಿ ಎಂದು ವಾಗ್ದಾಳಿ ನಡೆಸಿದರು.

ನೆಹರೂ ಹಾಗೂ ಇಂದಿರಾ ಗಾಂಧಿ ವಿರುದ್ಧ ಸಿಟಿ ರವಿ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಸದ ಪಿ.ಸಿ.ಮೋಹನ್ ಈ ಹೇಳಿಕೆ ನೀಡಿದ್ದಾರೆ.

Join Whatsapp